ಕರ್ನಾಟಕಪ್ರಮುಖ ಸುದ್ದಿ

ಹಾನಗಲ್ ಉಪ ಚುನಾವಣೆ : ಮುಖ್ಯಮಂತ್ರಿ,ಎಸ್. ಬಸವರಾಜ್ ಬೊಮ್ಮಾಯಿ ಪ್ರಚಾರ ; ಸಿದ್ದರಾಮಯ್ಯ ನವರೇನೇ ಹೇಳಿದರೂ ನಮಗೆ ಅನುಕೂಲ ಮಾಡಿಕೊಟ್ಟ ಹಾಗೆ

ರಾಜ್ಯ (ಹಾನಗಲ್) ಅ.25 : -ಹಾನಗಲ್ ನ ಉಪ ಚುನಾವಣೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ, ಎಸ್. ಬಸವರಾಜ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದಾರೆ.
ಹಾನಗಲ್ ನ ಉಪ ಚುನಾವಣೆ ಪ್ರಚಾರದ ವೇಳೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಮಹಿಳೆಯರ ಭದ್ರತೆ ಬಗ್ಗೆ ವಿಧಾನ ಸಭೆಯಲ್ಲಿ ನಾನು ಸಂರ್ಪೂಣ ಮಾಹಿತಿ ನೀಡಿದ್ದೇನೆ,ವಿರೋಧ ಪಕ್ಷದವರ ಆಳ್ವಿಕೆಯಲ್ಲಿ ಎಷ್ಟು ಪ್ರಕರಣಗಳಾಯಿತು ಹೇಗೆ ಕ್ರಮ ತೆಗೆದುಕೊಂಡರು, ನಮ್ಮ ಪಕ್ಷದ ಆಳ್ವಿಕೆಯಲ್ಲಿ ಎಷ್ಟು ಪ್ರಕರಣಗಳಿವೆ ಎಂದು ಎಲ್ಲಾ ದಾಖಲೆಗಳಿವೆ ಎಂದರು.
ಕೋವಿಡ್ ನಿಂದ ನಮ್ಮ ದೇಶದಲ್ಲಿ ಮಾತ್ರ ಸಾವಾಗಿಲ್ಲ, ಜಗತ್ತಿನ ಎಲ್ಲ ಕಡೆಯೂ ಸಾವು ಸಂಭವಿಸಿದೆ. ಕೋವಿಡ್ ನ್ನು ತಡೆಯಲು ಲಸಿಕೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಲಸಿಕೆ ಬರುವ ಮೊದಲು ಎಷ್ಟು ಸಾವಿನ ಪ್ರಮಾಣವಿತ್ತು, ಈಗ ಎಷ್ಟಿದೆ ಎಂದು ನೀವೇ ತಿಳಿದುಕೊಳ್ಳಬಹುದು , ಕೋವಿಡ್ ನಿಂದ ಸಾವನ್ನು ತಡೆಯಲು ಲಸಿಕೆಯೇ ಸುರಕ್ಷಾ ಚಕ್ರ. ಅದಕ್ಕಾಗಿ ನಮ್ಮ ದೇಶದಲ್ಲಿ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಿದ್ದೇವೆ. ಎಲ್ಲವನ್ನು ಸಿನಿಕತನದಿಂದ ನೋಡುವುದು ನೋಡುವುದು ಸರಿಯಲ್ಲ ಎಂದರು. ಇಷ್ಟು ದೊಡ್ಡ ಸಂಕಷ್ಟದ ಕಾಲದಲ್ಲೂ ಒಂದು ಸರ್ಕಾರ ಸರಿಯಾಗಿ ನಡೆದುಕೊಂಡು ಅದನ್ನು ಯಶಸ್ವಿ ಮಾಡಿದಾಗ, ಅದನ್ನು ಯಾವ ರೀತಿ ನೋಡಬೇಕು ಅನ್ನುವುದು ಮುಖ್ಯ. ಮೊಸರಿನಲ್ಲಿ ಕಲ್ಲು ಹುಡುಕುವ ಹಾಗೆ ಎಲ್ಲದರಲೂ ತಪ್ಪು ಹುಡುಕುವುದು ಸರಿಯಲ್ಲ ಎಂದರು.
ಚುನಾವಣೆಯಲ್ಲಿ ನಾನು ಪ್ರಚಾರ ಮಾಡುತ್ತಿದ್ದೇನೆ. ನನ್ನನು ಟಾರ್ಗೆಟ್ ಮಾಡಿದರೆ ಅವರಿಗೆ ನಾಲ್ಕು ಮತಗಳು ಹೆಚ್ಚು ಬರಬಹುದು ಎಂದು ತಿಳಿದು ನನ್ನನ್ನು ಸಿದ್ದಾರಾಮಯ್ಯ ಟಾರ್ಗೆಟ್ ಮಾಡುತ್ತಿದ್ದಾರೆ, ಆದರೆ ಅದು ಸಾಧ್ಯವಿಲ್ಲ ಎಂದು ತಿಳಿಸಿದರು. , ಈ ರೀತಿ ಸುಳ್ಳಿನ ಆರೋಪ ಮಾಡುವವರು ಸುಳ್ಳಿನ ಕಂತೆಗಳು ಎಂದರು. ಜನರ ಭಾವನೆಗಳ ವಿರುದ್ಧ, ಹಾಗೂ ಬಿಜೆಪಿಯ ವಿರುದ್ಧ ಸಿದ್ದರಾಮಯ್ಯ ಏನೇ ಮಾತನಾಡಿದರೂ ಅದು ಅವರಿಗೆ ಉಪಯೋಗವಾಗುವುದಿಲ್ಲ, ಅದು ನಮಗೆ ಎಲ್ಲ ರೀತಿಯಲ್ಲೂ ಅನುಕೂಲ ಮಾಡಿಕೊಟ್ಟ ಹಾಗೆ ಎಂದು ತಿಳಿಸಿದರು.
ಶಾಲೆ ತೆರೆದಿರುವ ಕುರಿತು ಪ್ರತಿಕ್ರಿಯೆ ನೀಡಿ ಕೋವಿಡ್ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಶಾಲೆ ತೆರೆದಿದ್ದೇವೆ. ಇದರ ಬಗ್ಗೆ ಯಾವುದೇ ಭಯ ಬೇಡ, ಎಂದು ತಿಳಿಸಿದರು.

Leave a Reply

comments

Related Articles

error: