ಮೈಸೂರು

ಎನ್ ಟಿ ಎಂ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ : 2 ಟಿಪ್ಪರ್ ನಷ್ಟು ಕಸ ಸಂಗ್ರಹ

ಮೈಸೂರು,ಅ.25 : -ಎನ್.ಟಿ.ಎಂ. ಶಾಲೆಯ ಹೋರಾಟಗಾರರು ಮತ್ತು ರೈತರಿಂದ ಸ್ವಚ್ಛತಾ ಆಂದೋಲನ ಎನ್ ಟಿ ಎಂ ಶಾಲೆಯಲ್ಲಿ ಇಂದು  ಬೆಳಿಗ್ಗೆ ಆರಂಭಗೊಂಡು ಮಧ್ಯಾಹ್ನ ದ ವರೆಗೂ ನಡೆಯಿತು. ಇದರಲ್ಲಿ ಪ್ರಮುಖವಾಗಿ ರೈತರು, ಎನ್.ಟಿ.ಎಂ. ಶಾಲೆಯ ಹೋರಾಟಗಾರರು ಭಾಗವಹಿಸಿದ್ದರು.
ಎನ್.ಟಿ.ಎಂ. ಶಾಲೆಯ ಕಟ್ಟಡದ ತಾರಸಿಯ ಭಾಗದ ಮೇಲೆ ಸುಮಾರು 25 ವರ್ಷಗಳಿಂದ ಸ್ವಚ್ಛ ಮಾಡದೆ ಇದ್ದ ಸುಮಾರು 2 ಟಿಪ್ಪರ್ ನಷ್ಟು ಕಸ ಸಂಗ್ರಹವಾಗಿದೆ. ಸುತ್ತಮುತ್ತಲಿನ ಬಾಗೇಮರ, ಎಲಚಿಮರ, ನೇರಳೆಮರದ ಎಲೆಗಳು,ಉದುರಿ ಬಿದ್ದು, ಜೊತೆಗೆ ಅನೇಕ ರೀತಿಯ ಸಸ್ಯಗಳು ಬೆಳೆದು, ತಾರಸಿಯ ಮೇಲೆ ಬಿದ್ದ ಮಳೆಯ ನೀರು ಹೊರಗೆ ಹರಿಯಲು ತಡೆಯಾಗಿತ್ತು . ತಾರಸಿಯು ಶಿಥಿಲಾವಸ್ಥೆಗೆ ತಲುಪಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು, ಶಾಲಾ ಸಿಬ್ಬಂದಿಗಳ, ಬೇಜವಾಬ್ದಾರಿತನ ಕಾರಣ. ಇದನ್ನು ಕಂಡ ಹೋರಾಟಗಾರರು ಸ್ವ ಇಚ್ಛೆಯಿಂದ ತಾವೇ ಸ್ವಚ್ಛ ಮಾಡುವುದರ ಮೂಲಕ ಶಾಲೆಗೆ ಜೀವ ತುಂಬುವುದರ ಜೊತೆಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು, ಶಾಲೆಯನ್ನು ಉಳಿಸುವಂತಹ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದಾರೆ. ಒಂದು ವಾರಗಳ ಕಾಲ ಈ ಸ್ವಚ್ಛತಾ ಕಾರ್ಯಕ್ರಮವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಆರ್.ಮಧುಮತಿ,ಹೊಸಕೋಟೆ ಬಸವರಾಜು, ಕಾವಲು ಪಡೆಯ ಮೋಹನ್ ಕುಮಾರ್ ಗೌಡ, ರವಿಗೌಡ, ಚಿಂತಕ ತೆರಕಣಾಂಬಿ ಬಸವರಾಜ್, ಬೆಮೆಲ್ ಸಿದ್ದಲಿಂಗಪ್ಪ, ರಾಜ್ ಕಿಶೋರ್, ಪಾರ್ಥ ಸಾರಥಿ, ಆರ್.ಪ್ರಸಾದ್, ಬಿ.ಪಂಪಾಪತಿ,ರೈತರುಗಳಾದ ಬಸವರಾಜು, ರವಿ.ಕೆ, ಕೆಂಚೇಗೌಡ,ಶಿವಣ್ಣ, ಸಿ.ಕೆ.ರಾಜ ಕುಮಾರ್, ಮಸಣಯ್ಯ,ಗೋವಿಂದರಾಜು, ಕೋಚನಹಳ್ಳಿ ದೇವಣ್ಣ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: