ಕರ್ನಾಟಕಪ್ರಮುಖ ಸುದ್ದಿ

ಕುಲಕುಲವೆಂದು ಹೊಡೆದಾಡದಿರಿ ಕನಕದಾಸರ ನುಡಿ ಪ್ರಸ್ತಾಪಿಸಿ ಸಿದ್ದರಾಮಯ್ಯ ನವರಿಗೆ ಟಾಂಗ್ ನೀಡಿದ ಸಿಎಂ

ರಾಜ್ಯ( ಹಾವೇರಿ ) ಅ,25 ; – ಹಾನಗಲ್ ನ ಉಪ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮುಖ್ಯಮಂತ್ರಿ ಎಸ್ ಬಸವರಾಜ್ ಬೊಮ್ಮಾಯಿ ಪ್ರಚಾರ ಮಾಡುತ್ತಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ನವರು ಸಿಎಂ ಬಸವರಾಜ ಬೊಮ್ಮಾಯಿ ಕುರಿ ಕಾದಿದ್ದಾರ ಎಂದು ಕೇಳಿದ್ದ ಪ್ರಶ್ನೆಗೆ ಹಾನಗಲ್ ನ ಹುಲ್ಲತ್ತಿ ಗ್ರಾಮದಲ್ಲಿ ನಡೆದ ಪ್ರಚಾರದ ವೇಳೆ  ಉತ್ತರಿಸಿ ನಾನು ಮಹಾರಾಷ್ಟ್ರಾದಲ್ಲಿ ಕುರಿ ಕಾದಿದ್ದೇನೆ, ಆದರೆ ಆ ಪ್ರಶ್ನೆ ಈಗ ಬೇಡ . ನಮ್ಮ ತಂದೆಯವರಿಗೆ ಕುರಿಗಾಹಿಗಳ ಜೊತೆ ಅವಿನಾಭಾವ ಸಂಬಂಧವಿತ್ತು. ನಾನು ಹೇಳಿದ್ದು ಈ ಕಂಬಳಿಗೆ ತುಂಬ ಗೌರವವಿದೆ , ಬಿಸಿಲು, ಗಾಳಿ , ಚಳಿ, ಮಳೆ ಎನ್ನದೆ ಕುರಿ ಕಾದು, ಉಣ್ಣೆಯನ್ನು ಉತ್ಪಾದನೆ ಮಾಡಿ, ಅದನ್ನು ಕಂಬಳಿ ಮಾಡಿರುತ್ತಾರೆ , ಆದ್ದರಿಂದ ಇದ್ದನ್ನು ಹಾಕಿಕೊಳ್ಳಲು ಯೋಗ್ಯತೆ ಇರಬೇಕು ಎಂದು ನಾ ಹೇಳಿದೆ . ಯಾರ ಹೆಸರನ್ನು ಸಹ ನಾ ತಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲ ಸಮುದಾಯವನ್ನು ಸಮಾನವಾಗಿ ಕಾಣುತ್ತೇನೆ. ಎಲ್ಲ ಸಮುದಾಯದ ಅಭಿವೃಧ್ದಿಗಾಗಿ ಕೆಲಸ ಮಾಡುತ್ತೇನೆ,ಕನಕದಾಸರ ವಿಚಾರವನ್ನು ನಾವು ಒಪ್ಪಿಕೊಂಡವರು , ಕುಲಕುಲವೆಂದು ಹೊಡೆದಾಡದಿರಯ್ಯ ಎಂದು ಕನಕದಾಸರ ಮಾತನ್ನು ಪ್ರಸ್ತಾಪಿಸಿ , ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.
ಈ ವೇಳೆ ವೇದಿಕೆ ಮೇಲೆ ಸಚಿವ ಶಿವರಾಮ ಹೆಬ್ಬಾರ್ ಶಿವಕುಮಾರ ಉದಾಸಿ,ಹಾಗೂ ಬಿಜೆಪಿ ಗಣ್ಯರು ಉಪಸ್ಥಿತರಿದ್ದರು. (ಎಸ್.ಎಂ)

Leave a Reply

comments

Related Articles

error: