ಮೈಸೂರು

ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆಗೆ ಹೆಚ್ಚುವರಿ ನಿಯೋಜಿತ ಅಧಿಕಾರಿಗಳ ನೇಮಕ

ಮೈಸೂರು, ಅ.25:- ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅರ್ಜಿಗಳು ಸ್ವೀಕೃತವಾಗಿರುವುದರಿಂದ ಹೆಚ್ಚುವರಿ ನಿಯೋಜಿತ ಅಧಿಕಾರಿಗಳನ್ನು 3 ವಿಧಾನ ಕ್ಷೇತ್ರದ ವ್ಯಾಪ್ತಿಗೆ ಅಧಿಕಾರಿಗಳಾಗಿ ನೇಮಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಚುನಾವಣಾಧಿಕಾರಿಗಳು ಆದೇಶಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಲಯ ಆಯುಕ್ತರಾಗಿ ವಲಯ ಕಚೇರಿ-1ಕ್ಕೆ ಚಂದ್ರಮ್ಮ ವೈ.ಎನ್ ದೂ.ಸಂ:9449338536, ವಲಯ ಕಚೇರಿ-2ಕ್ಕೆ ಬಸವಣಪ್ಪ ಕಲಶೆಟ್ಟಿ ಬಿ, ದೂ. ಸಂ: 9742454353, ವಲಯ ಕಚೇರಿ-3ಕ್ಕೆ ಎಚ್.ಡಿ ರಾಜೇಶ್ ದೂ. ಸಂ:9449856613, ವಲಯ ಕಚೇರಿ-4ಕ್ಕೆ ಪ್ರಿಯದರ್ಶಿನಿ ದೂ.ಸಂ: 9731946699, ವಲಯ ಕಚೇರಿ-5ಕ್ಕೆ, ಕೆ.ಕೃಷ್ಣ ದೂ.ಸಂ: 9448900617, ವಲಯ ಕಚೇರಿ-6ಕ್ಕೆ ಕಾರ್ತಿಕ್ ಎಂ, ದೂ.ಸಂ: 8105934489, ವಲಯ ಕಚೇರಿ-7ಕ್ಕೆ ಎಂ. ನಂಜುಂಡಯ್ಯ ದೂ. ಸಂ:9448008342, ವಲಯ ಕಚೇರಿ-8ಕ್ಕೆ ಶಿವಕುಮಾರ್, ದೂ. ಸಂ:-9900684767, ವಲಯ ಕಚೇರಿ-9ಕ್ಕೆ ಹೆಚ್. ನಾಗರಾಜು 9845144869 ಅವರನ್ನು ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಕಾರ್ಯವನ್ನು ನಿಗಧಿತ ಅವಧಿಯೊಳಗೆ ಗುಣಾತ್ಮಕವಾಗಿ ಪೂರ್ಣಗೊಳಿಸಲು ವಲಯ ಕಚೇರಿ 1 ರಿಂದ 9 ರವರೆಗೆ ಹೆಚ್ಚುವರಿ ನಿಯೋಜಿತ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

comments

Related Articles

error: