ಮೈಸೂರು

45 ಮಂದಿ ಪತ್ರಕರ್ತರಿಗೆ ಪರಿಹಾರ

ಮೈಸೂರು,ಅ.25: – ಕೋವಿಡ್ ಸಂದರ್ಭದಲ್ಲಿ ಮೃತ ಪಟ್ಟ 45 ಮಂದಿ ಪತ್ರಕರ್ತರ ಕುಟುಂಬಕ್ಕೆ ಮುಖ್ಯಮಂತ್ರಿ ಘೋಷಿಸಿದ 5 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದರು.
ಇಂದು ಮೈಸೂರಿನ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಅನೌಪಚಾರಿಕವಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸ್ವಾಗತ ಸ್ವೀಕರಿಸಿ ಅವರು ಮಾತನಾಡಿದರು. ಕೋವಿಡ್ ನಿಂದಾಗಿ ಸಾಕಷ್ಟು ಪತ್ರಕರ್ತರು ಹಿಂದೆಂದೂ ಕಂಡರಿಯದ ಸಮಸ್ಯೆ, ಸವಾಲು ಎದುರಿಸಿದ್ದು, ಅಷ್ಟೇ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ನಡುವೆ ಮೈಸೂರು ಪತ್ರಕರ್ತರ ಸಂಘ ತನ್ನದೇ ಘನತೆ, ಗೌರವವನ್ನು ಹೊಂದಿದ್ದು, ಅದನ್ನು ಮುಂದಿನ ದಿನಗಳಲ್ಲಿಯೂ ಕಾಪಾಡಿಕೊಂಡು ಹೊಸ ಸಮಿತಿ ಮುನ್ನಡೆಯುವ ವಿಶ್ವಾಸವಿದೆ. ಪತ್ರಕರ್ತರ ಸಹಾಯಕ್ಕೆ ಸದಾಕಾಲ ರಾಜ್ಯ ಸಂಘ ಸಹಕಾರ ನೀಡಲಿದೆ ಎಂದರು.
ರಾಜ್ಯ ಸಮಿತಿ ಸದಸ್ಯ ಸತ್ಯನಾರಾಯಣ,ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಕಾರ್ಯದರ್ಶಿ ರಂಗಸ್ವಾಮಿ, ಸಮಿತಿ ಸದಸ್ಯ ಕೃಷ್ಣ, ಮಾಜಿ ಸದಸ್ಯ ಜಯಶಂಕರ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: