ಮೈಸೂರು

ವಿಶ್ವದ ಅತ್ಯುತ್ತಮ ವಿಜ್ಞಾನಿಗಳ ಪೈಕಿ ಪ್ರೊ.ರಂಗಪ್ಪ ಅವರಿಗೂ ಸ್ಥಾನ

ಮೈಸೂರು, ಅ. 25 :-ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ರಾಸಾಯನಶಾಸ್ತ್ರ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಅವರು ಸಾವಯವ ರಾಸಾಯನಿಕ ಕ್ಷೇತ್ರದಲ್ಲಿ ವಿಶ್ವದ 2% ಅತ್ಯುತ್ತಮ ವಿಜ್ಞಾನಿಗಳ ಪೈಕಿ ಎರಡನೆಯ ಬಾರಿಗೆ ಸ್ಥಾನ ಪಡೆದುಕೊಂಡಿದ್ದಾರೆ.

ಈ ರ್ಯಾಂಕಿಂಗ್ ಪಟ್ಟಿಯನ್ನು ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತದೆ. 2020ರಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಡಾ. ಕೆ.ಎಸ್. ರಂಗಪ್ಪ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ, ಅಕ್ಟೋಬರ್ 19 2021ರಂದು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ವರದಿಯಲ್ಲಿ ಈ ಪ್ರಶಂಸೆ ನೀಡಲಾಗಿದೆ.

ಇದರೊಂದಿಗೆ, ಇದೇ ಸಂಸ್ಥೆ ಮತ್ತೊಂದು ವರದಿಯನ್ನು ಸಿದ್ಧಪಡಿಸಿದ್ದು, 2020ರ ಕ್ಯಾಲೆಂಡರ್ ವರ್ಷದಲ್ಲಿ ಸಂಸ್ಥೆ ವಿಶ್ವದ ಅತ್ಯುತ್ತಮ 2% ವಿಜ್ಞಾನಿಗಳನ್ನು ಅನ್ವೇಷಿಸಿತ್ತು.

ಪ್ರೊ. ರಂಗಪ್ಪ ಅವರು ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ 60 ವರ್ಷಗಳಿಗೆ ಮೇಲ್ಪಟ್ಟಂತಹ ವಿಜ್ಞಾನಿಗಳ ಪೈಕಿ ಈ ಪ್ರಶಂಸೆಗೆ ಪಾತ್ರವಾಗಿರುವ ಏಕೈಕ ವಿಜ್ಞಾನಿ ಎನಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: