ಮೈಸೂರು

ಹಾಡಹಗಲೇ ಕಳ್ಳರ ಕೈಚಳಕ : 15ಗ್ರಾಂನಷ್ಟು ಚಿನ್ನದ ಸರ ಕಸಿದು ಪರಾರಿ

ಮೈಸೂರು,ಅ.26:- ಮೈಸೂರು ನಗರದಲ್ಲಿ ಸರಗಳ್ಳರು ಮತ್ತೆ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಹಾಡುಹಗಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಅಪಹರಿಸಲು ಯತ್ನಿಸಿದ್ದು 15ಗ್ರಾಂನಷ್ಟು ಸರವನ್ನು ಮಾತ್ರ ಕದಿಯಲು ಸಾಧ್ಯವಾದ ಘಟನೆ ಕೃಷ್ಣಮೂರ್ತಿಪುರಂನಲ್ಲಿ ಇಂದು ಮಧ್ಯಾಹ್ನ  ನಡೆದಿದೆ.

ಕೃಷ್ಣಮೂರ್ತಿ ಪುರಂ ನಿವಾಸಿ ಶೋಭಾ(45)ಎಂಬವರೇ 15ಗ್ರಾಂ ಚಿನ್ನ ಕಳೆದುಕೊಂಡವರು ಇವರು ಕೃಷ್ಣಮೂರ್ತಿಪುರಂನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ 80ಗ್ರಾಂ ಚಿನ್ನದ ಸರವನ್ನು ಕದಿಯಲು ಯತ್ನಿಸಿದರಾದರೂ ಅವರು ಗಟ್ಟಿಯಾಗಿ ಸರವನ್ನು ಹಿಡಿದುಕೊಂಡ ಕಾರಣ ಕೇವಲ 15ಗ್ರಾಂ ನಷ್ಟೇ ಸರವನ್ನು ಕಿತ್ತು ಪರಾರಿಯಾಗಲು ಸಾಧ್ಯವಾಗಿದೆ ಎನ್ನಲಾಗಿದೆ. ಅವರು ಸರವನ್ನು ಎಳೆದ ರಭಸಕ್ಕೆ ಸರ ತುಂಡಾಗಿ ಉಳಿದ ಭಾಗ ಇವರ ಕೈನಲ್ಲಿಯೇ  ಭದ್ರವಾಗಿ ಉಳಿದಿದೆ.

ಸ್ಥಳಕ್ಕೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮೋಹಿತ್ ಸಹದೇವ್ ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು ಸಮೀಪದಲ್ಲಿ ಅಳವಡಿಸಲಾದ ಸಿಸಿ ಟಿವಿ ಫೂಟೇಜ್ ಗಳ ತಪಾಸಣೆ ನಡೆಸಿದ್ದಾರೆ. ನಗರದಲ್ಲಿ ನಾಕಾಬಂಧಿ ರಚಿಸಲಾಗಿದ್ದು, ಪೊಲೀಸರು ಕಳ್ಳರನ್ನು ಹಿಡಿಯಲು ಕಠಿಣ ಕ್ರಮ ವಹಿಸಿದ್ದಾರೆ. ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: