ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯನವರಿಂದ ಪಕ್ಷ ಸಂಘಟನೆಯ ಬಗ್ಗೆ ಕಲಿಯಬೇಕಿಲ್ಲ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ (ವಿಜಯಪುರ), ಅ ,26 :-  ಸಿಂದಗಿಯಲ್ಲಿ ನಡೆಯಲಿರುವ ಉಪಚುನಾವಣೆ ಪ್ರಯುಕ್ತ  ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ  ತಮ್ಮ ಪಕ್ಷದ ಅಭ್ಯರ್ಥಿ ಪರ ಮತಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಇಂದು ಬಿಜೆಪಿಯ ಬಲವರ್ಧನೆಗೆ ನೇರವಾದ ಕಾರಣ  ಸಿದ್ದರಾಮಯ್ಯನವರ ನಡವಳಿಕೆಗಳು. ಅವರು ಒಬ್ಬರು ಸರಿ ಇದ್ದಿದ್ದರೆ ಬಿಜೆಪಿ ಎಂದೋ  ಜನರಿಂದ ದೂರ ಹೋಗುತ್ತಿತ್ತು ಎಂದರು. ಜೆಡಿಎಸ್ ಮತ್ತು ಬಿಜೆಪಿ ನಡುವೆ ಒಪ್ಪಂದವಿದೆ.   1983 ರಿಂದ ನಾನು ಅಧಿಕಾರದಲ್ಲಿ ಇದ್ದೀನಿ ಕುಮಾರಸ್ವಾಮಿ ಬಂದ್ದಿದ್ದು 1996 ರಲ್ಲಿ ಅನ್ನುತ್ತಾರೆ ಸಿದ್ದರಾಮಯ್ಯ. ಆದರೆ  1994 ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಕೊಡುಗೆ ನನ್ನದಿದೆ.  ನಾನು ಆ ದಿನದಲ್ಲಿ ರಾಜಕಾರಣದಲ್ಲಿ ಇಲ್ಲದಿದ್ದರೂ ಜೆಡಿಎಸ್ ಅಧಿಕಾರಕ್ಕೆ ಬರಲು ನಾನು ದೂರದ್ದಲ್ಲಿದ್ದೇ  ಶ್ರಮಿಸಿದ್ದೇನೆ. ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಅಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ್ದೇನೆ. ಅವರಿಂದ ನಾನು ಪಕ್ಷದ ಸಂಘಟನೆ ಬಗ್ಗೆ ಕಲಿಯಬೇಕಿಲ್ಲ ಎಂದು ಕಿಡಿ ಕಾರಿದರು.

ಈ ಕ್ಷೇತ್ರದ ಉಪಚುನಾವಣೆ ಕುರಿತು  ನೋಡುವುದಾದರೆ ಕಾಂಗ್ರೆಸ್ ಮೂರನೆಯ ಸ್ಥಾನದಲ್ಲಿಯೇ ಇದೆ. ಇವತ್ತೂ ಸಹ ಕಾಂಗ್ರೆಸ್ ಬಂದು ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡಿದರೂ  ಸಿಂದಗಿ ಕ್ಷೇತ್ರದ ಮತದಾರರು ಈಗಲೂ  ಸಹ  ಜೆಡಿಎಸ್ ಪಕ್ಷದ ಪರವಾಗಿ ಭಾವನೆಗಳನ್ನೇ ವ್ಯಕ್ತಪಡಿಸುತ್ತಾರೆ. ಅದಕ್ಕೆ ಮೂಲ ಕಾರಣ ದೇವೇಗೌಡರು ಕೊಟ್ಟ ನೀರಾವರಿ ಯೋಜನೆಗಳು ಮತ್ತು ನನ್ನ ಕಾಲದಲ್ಲಿ ಕೊಟ್ಟಿರುವ ಕೊಡುಗೆಗಳು.  ಜನತೆ ಹಲವಾರು ಕಾರ್ಯಕ್ರಮಗಳ ಬಗ್ಗೆ ಇವತ್ತಿಗೂ ಸ್ಮರಿಸುತ್ತಾರೆ. ಜನತೆಯ ಒಲವು ಈ ಬಾರಿ ನಮಗೇ ಸಿಗಲಿದೆ. ಈ ಹಿಂದೆಯ ಚುನಾವಣೆಗಳಲ್ಲಿ ತಿಂದಿರುವ ನೋವುಗಳನ್ನು ಈ ಭಾಗದ ಜನರು  ಸರಿಪಡಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು. (ಎಸ್.ಎಂ)

Leave a Reply

comments

Related Articles

error: