ಮೈಸೂರು

ಐದೇ ವರ್ಷಕ್ಕೆ ಸೋರುತಿದೆ ಶಾಲಾ ಕಟ್ಟಡ, ಕಟ್ಟಡ ನಿರ್ಮಾಣದಲ್ಲಿ ಅಕ್ರಮದಿಂದ ಶಾಲೆ ದುಸ್ಥಿತಿ

ಜಲಾವೃತಗೊಂಡ ಚೋರನಹಳ್ಳಿ ಸರ್ಕಾರಿ ಶಾಲೆ!

ಮೈಸೂರು,ಅ.26:- ನಗರದ ರಿಂಗ್ ರಸ್ತೆಯ ಕೂಗಳತೆಯ ದೂರದಲ್ಲಿರುವ ಚೋರನಹಳ್ಳಿ ಸರ್ಕಾರಿ ಶಾಲೆ ನಿನ್ನೆ ಬಿದ್ದ ಭಾರೀ ಮಳೆಗೆ ಜಲಾವೃತಗೊಂಡಿದ್ದು, ಐದು ವರ್ಷಗಳ ಹಿಂದೆ ನಿರ್ಮಿಸಿದ ಸುಸಜ್ಜಿತ ಕಟ್ಟಡಗಳು ಸೋರಲಾರಂಭಿಸಿರುವುದು ಮಕ್ಕಳ ಶಾಲಾ ಪಾಠಕ್ಕೆ ತೊಂದರೆಯಾಗಿ ಪರಿಣಮಿಸಿದೆ.

ಚೋರನಹಳ್ಳಿ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 110 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಶಾಲಾ ಆವರಣದಲ್ಲಿ ಎಲ್ಲಾ ಕಟ್ಟಡಗಳು ಮಳೆ ನೀರಿಗೆ ಸೋರುತ್ತಿವೆ. ಒಟ್ಟು 13 ಕಟ್ಟಗಳಿದ್ದು, ಇದರಲ್ಲಿ ಒಂದು ಕಟ್ಟಡ ಸಂಪೂರ್ಣ ಶಿಥಿಲಗೊಂಡು ಇಂದೋ ನಾಳೆಯೋ ಬೀಳುವ ಸ್ಥಿತಿಯಲಿದೆ‌. ಉಳಿದ ಮೂರು ಕಟ್ಟಡಗಳಲ್ಲಿ ಹೆಂಚು ಹಾರಿ ನೀರು ನಿಂತು ಬಳಸಲು ಅಸಾಧ್ಯವಾದ ಸ್ಥಿತಿಯಿದೆ. ಉಳಿದ ಆರು ನೂತನ ಕಟ್ಟಡಗಳಲ್ಲಿ ಮೂರನ್ನು ಮೇಲ್ಛಾವಣಿ ದುರಸ್ತಿ ಮಾಡಿದಾಗಿಯೂ ಸೋರುತ್ತಿದೆ. ಇನ್ನೂ ಐದು ವರ್ಷಗಳ ಹಿಂದೆ ನಿರ್ಮಿಸಿದ ಮೂರು ಕಟ್ಟಡಗಳು ಸೋರುತ್ತಿರುವುದು ಶಾಲಾ ಕಟ್ಟಡ ಕಳಪೆ ಕಾಮಗಾರಿಯನ್ನು ಬಹಿರಂಗ ಪಡಿಸಿದೆ.
ಇನ್ನೂ ಶಾಲಾ ಆವರಣದೊಳಗೆ ನೀರು ನುಗ್ಗಿ ಕೊಠಡಿಗಳು ಜಲಾವೃತಗೊಂಡಿದ್ದು, ಮಕ್ಕಳು ಕಲಿಯಲಾಗದೇ ಆವರಣದಲ್ಲಿಯೇ ನಿಂತು ನೋಡುವಂತೆ ಆಗಿದೆ‌. ಇನ್ನೂ ಅಡುಗೆ ತಯಾರಿ ಕೊಠಡಿ, ಗ್ರಂಥಾಲಯ ಗಳ ಕಟ್ಟೆವೇ ಕುಸಿದಿದ್ದು, ಸಂಪೂರ್ಣ ಶಾಲೆ ಬಿದ್ದ ಜೋರು ಮಳೆಗೆ ಅವನತಿ ಹಾದಿ ಹಿಡಿದಿರುವುದು ಅಲ್ಲಿ ಅವ್ಯವಸ್ಥೆಗಳ ದರ್ಶನಕ್ಕೆ ಕಾರಣವಾದಂತಾಗಿದೆ. ಮ
ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಿವೃತ್ತ ಸೈನಿಕರ ಸಂಘದ ಸಿಎಸ್ ಆರ್ ನಿಧಿಯಲ್ಲಿ ನಿರ್ಮಿಸಿ ಉದ್ಘಾಟನೆ ಗೊಂಡ ಕಟ್ಟಡಗಳು ಸೋರುವ ಮೂಲಕ ಶಾಲೆಯತ್ತ ಮಕ್ಕಳನ್ನು ಕಳುಹಿಸಬೇಕೇ ಬೇಡವೇ ಎಂಬ ಸ್ಥಿತಿ ತಲುಪಿರುವ ಶಾಲೆಯತ್ತ ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರತಿ ಬಾರಿಯೂ ಮಳೆ ಬಂದಾಗ ಶಾಲಾ ಕಟ್ಟಡಗಳು ನೀರು ತುಂಬಿಕೊಳ್ಳುತ್ತವೆ‌. ಮರು ದಿನ ನೀರು ಇಂಗುತ್ತಿದ್ದವು, ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನೀರು ತುಂಬಿದ್ದು, ಮಕ್ಕಳಿಗೆ ಪಾಠ ಕಲಿಸಲು ಪರ್ಯಾಯ ದಾರಿ ಹುಡುಕಲಾಗಿದೆ ಎಂದು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಮಹದೇವಮ್ಮ ತಿಳಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: