ಮೈಸೂರು

ಕುಸಿದುಬಿದ್ದ ಜಯದೇವ ಹೃದ್ರೋಗ ಆಸ್ಪತ್ರೆ ಕಾಂಪೌಂಡ್

ಮೈಸೂರು, ಅ.26:- ಮೈಸೂರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಜಯದೇವ ಹೃದ್ರೋಗ ಆಸ್ಪತ್ರೆ ಕಾಂಪೌಂಡ್ ಕುಸಿದುಬಿದ್ದಿದೆ.

ಮೈಸೂರು-ಕೆ.ಆರ್.ಎಸ್.ಮುಖ್ಯ ರಸ್ತೆಯಲ್ಲಿರುವ ಆಸ್ಪತ್ರೆ 2016 ರಲ್ಲಿ ಉದ್ಘಾಟನೆಗೊಂಡಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉದ್ಘಾಟನೆಯಾಗಿದೆ.ಕೋಟ್ಯಾಂತರ ಹಣ ವೆಚ್ಚಮಾಡಿ ನಿರ್ಮಿಸಿದ ಆಸ್ಪತ್ರೆ ಕಾಂಪೌಂಡ್ ನಿನ್ನೆ ಸುರಿದ ಮಳೆಗೆ ಕುಸಿದುಬಿದ್ದಿದೆ. ಕಳಪೆ ಕಾಮಗಾರಿಗೆ ನಿದರ್ಶನವಾಗಿರುವ ಕಾಂಪೌಂಡ್ ಕೇವಲ ಐದಾರು ವರ್ಷಗಳಲ್ಲೇ ಕಂಟ್ರಾಕ್ಟರ್ ಬಣ್ಣ ಬಯಲುಮಾಡಿದೆ. ಕಳಪೆ ಕಾಮಗಾರಿ ಕೈಗೊಳ್ಳಲು ಕಾರಣವಾದವರ ವಿರುದ್ದ ಕ್ರಮ ಕೈಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: