ಮೈಸೂರು

ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಜಾಗೃತಿ ಅರಿವು ಸಪ್ತಾಹ ಆಚರಣೆ

ಮೈಸೂರು, ಅ.26:- ಕೇಂದ್ರೀಯ ಜಾಗೃತಿ ಆಯೋಗ (CVC)ವು 2021 ರ ಅಕ್ಟೋಬರ್ 26 ರಿಂದ ನವೆಂಬರ್ 01 ರವರೆಗೆ ಜಾಗೃತಿ ಅರಿವು ಸಪ್ತಾಹವನ್ನು “75ರಲ್ಲಿ ಸ್ವತಂತ್ರ ಭಾರತ; ಸಮಗ್ರತೆಯೊಂದಿಗೆ ಸ್ವಾವಲಂಬನೆ” ವಿಷಯದಲ್ಲಿ ಆಚರಿಸುತ್ತಿದೆ..

ರೈಲ್ವೆ ಮಂಡಳಿಯ ನಿರ್ದೇಶನಗಳ ಪ್ರಕಾರ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಅಕ್ಟೋಬರ್ 26 ರಿಂದ ನವೆಂಬರ್ 01 ರವರೆಗೆ “ಜಾಗೃತಿ ಅರಿವು ಸಪ್ತಾಹ 2021” ವನ್ನು ಆಚರಿಸುತ್ತಿದೆ. “75ರಲ್ಲಿ ಸ್ವತಂತ್ರ ಭಾರತ; ಸಮಗ್ರತೆಯೊಂದಿಗೆ ಸ್ವಾವಲಂಬನೆ” ಎಂಬುದು ಈ ಸಾರಿಯ ಜಾಗೃತಿ ಅರಿವು ಸಪ್ತಾಹದ ವಿಷಯವಾಗಿದೆ. ಈ ಜಾಗೃತಿ ಸಪ್ತಾಹದ ಅಭಿಯಾನವು ನಾಗರಿಕರ ಭಾಗವಹಿಸುವಿಕೆಯ ಮೂಲಕ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನುಉತ್ತೇಜಿಸುವ ನಮ್ಮ ಬದ್ಧತೆಯನ್ನು ದೃಢೀಕರಿಸುತ್ತದೆ

ಮೈಸೂರಿನ ಇರ್ವಿನ್ ರಸ್ತೆಯ ವಿಭಾಗೀಯ ಕಛೇರಿಯಲ್ಲಿರುವ ತೆರೆದ ಸಭಾಂಗಣದಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ  ರಾಹುಲ್ ಅಗರ್ವಾಲ್ ರವರು ವಿಭಾಗೀಯ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಮಗ್ರತೆಯ ಪ್ರತಿಜ್ಞೆಯನ್ನು ಬೋಧಿಸಿದರು. ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದೆ ಎಂದು ಹೇಳಿದರು. ಪ್ರತಿಜ್ಞೆ ಬೋಧಿಸುವಾಗ ಅವರು ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳಿಗೆ ಹಾಗು ಸಂಬಂಧಿಸಿದ ಎಲ್ಲರಿಗೂ ದೃಢವಾಗಿ ಉಳಿಯಲು ಮತ್ತು ಎಲ್ಲಾ ಸಮಯದಲ್ಲೂ ಪ್ರಾಮಾಣಿಕತೆ ಮತ್ತು ಸಮಗ್ರತೆಯ ಉನ್ನತ ಗುಣಮಟ್ಟಕ್ಕೆ ಬದ್ಧರಾಗಿರಲು ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಒಟ್ಟಾಗಿ ಕೆಲಸ ಮಾಡಲು ಒತ್ತಾಯಿಸಿದರು.

ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ  ಪ್ರಶಾಂತ್ ಮಾಸ್ತಿಹೊಳಿ ರವರು ಸಪ್ತಾಹದಲ್ಲಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು ಮತ್ತು ಸಂಪೂರ್ಣ ವಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಂಬಂದಿಸಿದ ಇತರರನ್ನು ಪ್ರೇರೇಪಿಸಿದರು.

ಈ ವಾರದಲ್ಲಿ ಸೈಕಲ್ ಜಾಥಾ, ಸಾಮಾನ್ಯ ಜ್ಞಾನ ಮತ್ತು ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಸ್ಕೌಟ್ಸ್ ಮತ್ತು ಗೈಡ್‌ಗಳಿಂದ ಲಘು ನಾಟಕದಂತಹ ಕಾರ್ಯಕ್ರಮಗಳ ಸರಣಿಯನ್ನು ಯೋಜಿಸಲಾಗಿದೆ. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: