ಮೈಸೂರು

ಇಂದಿನ ಯುವ ಜನತೆಗೆ ಕಾನೂನು ಅರಿವು ಮುಖ್ಯ : ಕೆ. ವಿದ್ಯಾ

ಮೈಸೂರು, ಅ. 26 :– ಇಂದಿನ ಯುವ ಸಮೂಹಕ್ಕೆ ಮಾನವೀಯ ಮೌಲ್ಯ, ಮಾನಸಿಕ ಬದ್ಧತೆ ಹಾಗೂ ಸ್ಥೈರ್ಯ ಮತ್ತು ಸಂಸ್ಕಾರ ಮುಖ್ಯವಾಗಿ ಬೇಕಾಗಿದೆ ಎಂದು ಮೈಸೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಕೆ. ವಿದ್ಯಾ ಹೇಳಿದರು.

.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ಇವರುಗಳು ಜಂಟಿಯಾಗಿ ಆಯೋಜಿಸಿದ್ದ ಉಚಿತ ಕಾನೂನು ಸೇವೆ ಮತ್ತು ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ವಿದ್ಯಾ ಅವರು ವಿದ್ಯಾರ್ಥಿಗಳಿಗೆ ದೃಷ್ಠಾಂತಗಳ ಮೂಲಕ ನೈತಿಕ, ಕಾನೂನು ಹಾಗೂ ಜೀವನದ ಮೌಲ್ಯಗಳ ಬಗ್ಗೆ ತಿಳಿಹೇಳಿದರು.
ಇಂದಿನ ನಾಗರೀಕರಿಗೆ ಪೋಷಕರ ಸಂರಕ್ಷಣಾ ಕಾಯ್ದೆ, ಸಂವಿಧಾನಬದ್ಧ ಕಾಯ್ದೆಗಳ ಅರಿವು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಾಧಿಕಾರವು ಗಣನೀಯ ಸೇವೆ ಮಾಡುತ್ತಿದೆ. ಇಂದು ವರದಕ್ಷಿಣೆ ಕಿರುಕುಳ, ಆತ್ಮಹತ್ಯೆ ಪ್ರಕರಣ ಹಾಗೂ ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇವೆಲ್ಲವನ್ನು ತಪ್ಪಿಸಲು ಯುವಜನತೆ ಪಣತೊಡಬೇಕು. ಹೆತ್ತ ತಂದೆ, ತಾಯಿಯರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುವುದು ಮುಖ್ಯ. ಏನೇ ಓದಿದರು, ಸಾಧಿಸಿದರೂ ಮಾನವೀಯ ಮೌಲ್ಯ ಮರೆತರೆ ಯಾವ ಪ್ರಯೋಜನವು ಇಲ್ಲ. ಏನಾದರೂ ಆಗಲಿ ಮೊದಲು ಮಾನವನಾಗಬೇಕು. ಕಾನೂನು ಅರಿವಿನ ದೀಪ ಹಚ್ಚಿ ದೀಪದಿಂದ ದೀಪ ಬೆಳಕನ್ನು ಚೆಲ್ಲುವ ಹಾಗೆ ನಾವು ಆತ್ಮಸ್ಥೈರ್ಯದಿಂದ ಜಾಗೃತರಾಗಿ ನಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ರವರು ಮಾತನಾಡುತ್ತಾ, ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ವಿಶೇಷವಾಗಿದ್ದು, 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಮೂಲಕ ಕಾನೂನು ಜ್ಞಾನ ಹೆಚ್ಚಿಸಲು ಕಾರ್ಯಕ್ರಮ ಸಹಾಯಕವಾಗಿದೆ.
ಇಂದಿನ ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ, ವೈಯಕ್ತಿಕ ಆಸೆಯಿಂದ ಪ್ರೀತಿ, ವಾತ್ಸಲ್ಯ, ವಿಶ್ವಾಸ, ಮಾನವೀಯತೆ, ಅನುಕಂಪ ಮತ್ತು ಸಂಬಂಧಗಳು ನಾಶವಾಗುತ್ತಿದೆ. ನಮ್ಮ ಸಮಾಜ ಹಾದಿ ತಪ್ಪುತ್ತಿದೆ ಇಂದಿನ ವಿದ್ಯಾರ್ಥಿಗಳು ಇದನ್ನು ಅರಿತು ಕಾನೂನಿನ ಅರಿವನ್ನು ಹೆಚ್ಚಿಸಿಕೊಂಡು ಅಪರಾಧ ತಡೆಗೆ ಕೈಜೋಡಿಸಬೇಕು ಹಾಗೂ ಹೆತ್ತವರೇ ದೇವರೆಂದು ತಿಳಿಯುತ್ತ, ತಂದೆ ತಾಯಿಯರನ್ನು ಅವರಿರುವ ತನಕ ಕಾಪಾಡುವ ಹೊಣೆ ನಮ್ಮದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ರಾ.ಸೇ.ಯೋ ಕಾರ್ಯಕ್ರಮಾಧಿಕಾರಿಗಳಾದ ಡಾ. ಜಿ.ದೊಡ್ಡರಸಯ್ಯ ಸ್ವಾಗತಿಸಿದರು ಮತ್ತು  ಸಿ.ಎಸ್. ಸಿದ್ದರಾಜು ವಂದಿಸಿದರು. ವಿದ್ಯಾರ್ಥಿ ಮನೋಜ ಎಸ್ ಎಲ್ ಪ್ರಾರ್ಥಿಸಿದರು, ರಾಜೀಕ್ ರಶೀದ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಸ್ವಯಂ ಸೇವಕರು, ವಿದ್ಯಾರ್ಥಿಗಳು, ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗದವರು ಭಾಗವಹಿಸಿದ್ದರು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: