ಕರ್ನಾಟಕಪ್ರಮುಖ ಸುದ್ದಿ

ಲಕ್ಷ ಕಂಠಗಳಲ್ಲಿ ಕನ್ನಡ ಗಾಯನ; ಯಶಸ್ವಿಗೊಳಿಸಲು ಸೂಚನೆ

ರಾಜ್ಯ(ಹಾಸನ) ಅ.27:-ರಾಜ್ಯದಲ್ಲಿ ಕನ್ನಡಕ್ಕಾಗಿ ನಾವು ಎಂಬ ವಾಕ್ಯದಡಿ ಅ.28ರ ಬೆಳಿಗ್ಗೆ 11 ಗಂಟೆಗೆ ಲಕ್ಷ ಕಂಠಗಳಲ್ಲಿ ಕನ್ನಡ ಗಾಯನವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ  ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಈ ಕಾರ್ಯಕ್ರಮವನ್ನು ಅಭಿಯಾನ ವೆಂದು ಪರಿಗಣಿಸಿ ರಾಜ್ಯದಾದ್ಯಂತ ಏಕ ಕಾಲದಲ್ಲಿಯೇ ಈಗಾಗಲೇ ಹಾಡಲು ನಿಗದಿಪಡಿಸಿರುವ ಗೀತೆಗಳನ್ನು ಹಾಡಲು ಸಿದ್ದತೆ ಮಾಡಿಕೊಳ್ಳುವಂತೆ ತಿಳಿಸಿದರು.

ಕನ್ನಡಕ್ಕಾಗಿ ನಾವು ಹಾಗೂ ಮಾತಾಡ್ ಮಾತಾಡ್ ಕನ್ನಡ ಎಂಬ ಎರೆಡು ವಿಶೇಷ ಘೋಷನೆಯಡಿಯಲ್ಲಿ ಒಂದು ವಾರದ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು.

ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕನ್ನಡ ಕಾರ್ಯಕ್ರಮವನ್ನು ಗರಿಷ್ಠ ಪ್ರಮಾಣದಲ್ಲಿ ಅಧ್ಯತೆ ತೆಗೆದುಕೊಂಡು ನೆರವೇರಿಸುವಂತೆ ಸೂಚನೆ ನೀಡಿದ್ದಾರೆ.

ಐದು ಗೀತೆಗಳನ್ನು ಹಾಡುವಂತೆ ತಿಳಿಸಿದ ಸಚಿವರು ಮುಖ್ಯವಾಗಿ ಮೂರು ಗೀತೆಗಳಾದ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಯನ್ನು ಕಡ್ಡಾಯವಾಗಿ ಹಾಡುವಂತೆ ತಿಳಿಸಿದರಲ್ಲದೇ, ವಿವಿಧ ಸ್ಥಳೀಯ ಗೀತೆಗಳನ್ನು 30 ನಿಮಿಷಗಳ ಕಾಲ ಹಾಡುವಂತೆ ತಿಳಿಸಿದರು.

ಅಕ್ಟೊಬರ್ 28 ರಂದು ಏಕಕಾಲದಲ್ಲಿ ಸರ್ಕಾರಿ ಕಚೇರಿಗಳ ಆವರಣದಲ್ಲಿ, ವಿದ್ಯಾ ಸಂಸ್ಥೆಗಳ ಆವರಣದಲ್ಲಿ, ಹಾಗೂ ಎಲ್ಲಾ ರೀತಿಯ ಉಧ್ಯಮಗಳಲ್ಲಿ, ಜನ ಸಾಮಾನ್ಯರು ಹೆಚ್ಚಾಗಿ ಹೋಡಾಡುವಂತಹ ಸ್ಥಳಗಳಲ್ಲಿ ಹಾಗೂ ವಿಮಾನ ನಿಲ್ದಾಣ ಗಳಲ್ಲಿಯೂ ಸಹ ಗಾಯನ ಕಾರ್ಯಕ್ರಮ ನಡೆಸುವಂತೆ ಸಚಿವರಾದ ಸುನಿಲ್ ಕುಮಾರ್ ಹೇಳಿದರು.

ಎಲ್ಲಾ ಗ್ರಾಮ ಪಂಚಾಯಿ ತಿಗಳಲ್ಲಿಯೂ ಕಾರ್ಯಕ್ರಮ ನಡೆಸಬೇಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ನಿರ್ದೇಶಿಸುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ ಸೂಚಿಸಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ರೀತಿಯ ಭಾಷಣವನ್ನು ನಡೆಸದಿರುವಂತೆ ಸಚಿವರು ಸೂಚನೆ ನೀಡಿದರು.

ಅನ್ಯ ಭಾಷೆ ಬಳಸದೆ ಕನ್ನಡ ಭಾಷೆಯನ್ನು ಮಾತನಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿ ದ್ದು, ರಾಜ್ಯ ಮಟ್ಟದ ವಿಜೇತರಿಗೆ 50 ಸಾವಿರ ಹಾಗೂ ಜಿಲ್ಲಾ ಮಟ್ಟದ ವಿಜೇತರಿಗೆ 10 ಸಾವಿರ ರೂಗಳ ಬಹುಮಾನ ನೀಡಲಾ ಗುವುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಅವರು ಮಾತನಾಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಐದು ಸಾವಿರ ಜನರು ಪಾಲ್ಗೊಂಳ್ಳು ವಂತೆ ಕಾರ್ಯಕರ್ಮವನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮವನ್ನು ಡ್ರೋನ್ ಮೂಲಕ ಚಿತ್ರೀಕರಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಬೇಲೂರು ಚನ್ನಕೇಶವ ದೇವಾಲಯದ ಆವರಣ, ಹಲ್ಮಿಡಿ ಗ್ರಾಮ ಹಾಗೂ ಶ್ರವಣಬೆಳಗೊಳ ದೇವಾಲಯದಲ್ಲಿ ಹಾಗೂ ಇನ್ನೂ ಹಲವು ಸ್ಥಳಗಳಲ್ಲಿ ಗಾಯನ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪ್ರಕಾಶ್, ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕ ರಾದ ಮಹಾಲಿಂಗಯ್ಯ, ಕನ್ನಡ ಮತ್ತು ಸಂಸೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ. ಸುದರ್ಶನ್ ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: