ಕರ್ನಾಟಕಪ್ರಮುಖ ಸುದ್ದಿ

ದೀಪಾವಳಿ ಹಬ್ಬದಂದು ಗೋ ಪೂಜೆ ಮಾಡುವಂತೆ ದೇವಾಲಯಗಳಿಗೆ ಆದೇಶ

ರಾಜ್ಯ(ಬೆಂಗಳೂರು),.27:-  ದೀಪಾವಳಿ ಹಬ್ಬದಂದು ಗೋ ಪೂಜೆ ಮಾಡುವಂತೆ ದೇವಾಲಯಗಳಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದೀಪಾವಳಿ ಹಬ್ಬದಂದು ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಮುಜರಾಯಿ ಇಲಾಖೆಯ ಎಲ್ಲಾ ದೇವಸ್ಥಾನದಲ್ಲಿ ಗೋಪೂಜೆ ಮಾಡುವಂತೆ ತಿಳಿಸಿದೆ.  ನವೆಂಬರ್‌ 5ರಂದು   ಬಲಿ ಪಾಡ್ಯಮಿ ಇದ್ದು, ಅಂದೇ ಗೋ ಪೂಜೆ ಮಾಡಬೇಕು.  ಅಂದು ಸಂಜೆ 5.30ರಿಂದ 6.30ರ ಗೋಧೂಳಿ ಲಗ್ನದಲ್ಲಿ ಪೂಜೆ ಮಾಡುವಂತೆ ಆದೇಶ  ಹೊರಡಿಸಲಾಗಿದೆ.

ಹಬ್ಬಗಳಲ್ಲಿ ಮನೆಯಲ್ಲಿರುವ ದನ ಕರುಗಳನ್ನು ಅಲಂಕರಿಸಿ, ಅವುಗಳಿಗೆ ಪೂಜೆ ಮಾಡಿ, ತಿಂಡಿತಿನಿಸುಗಳನ್ನು ನೀಡುವ ಸಂಪ್ರದಾಯ ನಮ್ಮಲ್ಲಿದ್ದು ಇದೀಗ ದೇವಾಲಯಗಳಲ್ಲಿ ಗೋಪೂಜೆಗೆ ಆದೇಶಿಸಲಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: