ಮೈಸೂರು

ಮೃಗಾಲಯದಲ್ಲಿ ಒರಂಗುಟಾನ್ ವೀಕ್ಷಣೆಗೆ ಲಭ್ಯ

ಮೈಸೂರು, ಅ.27 : ಮೈಸೂರಿನಲ್ಲಿರುವ ಚಾಮರಾಜೇಂದ್ರ ಮೃಗಾಲಯದಲ್ಲಿ ಆರ್.ಬಿ.ಐ ಹಾಗೂ ಇನ್ಫೋಸಿಸ್ ಸುಧಾಮೂರ್ತಿ ಅವರ ನೆರವಿನಿಂದ ನಿರ್ಮಿಸಲಾಗಿರುವ ಒರಂಗುಟಾನ್ ವಿಶೇಷ ಆವರಣ ಉದ್ಘಾಟನೆ ಇಂದು ಬೆಳಿಗ್ಗೆ 11ಗಂಟೆಗೆ ನಡೆಯಲಿದ್ದು, ಒರಂಗುಟಾನ್ ವೀಕ್ಷಣೆಗೆ ಲಭ್ಯವಾಗಲಿದೆ.
ಆರ್.ಬಿ.ಐ, ನೋಟು ಮುದ್ರಣಾಲಯದ ಅಧ್ಯಕ್ಷೆ ತೃಪ್ತಿ ಪಾತ್ರಘೋಷ್ ಉದ್ಘಾಟಿಸಲಿದ್ದು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್, ಆರ್, ಮಹದೇವಸ್ವಾಮಿ ಉಪಸ್ಥಿತರಿರುವರು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಸ್.ಎಂ)

Leave a Reply

comments

Related Articles

error: