ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಟಿ ಟ್ವೆಂಟಿ ವರ್ಲ್ಡ್ ಕಪ್ : ಟೀಂ ಇಂಡಿಯಾ ತಂಡದಲ್ಲಿ ಬದಲಾವಣೆ; ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಮೂವರ ಎಂಟ್ರಿ!

ವಿದೇಶ(ದುಬೈ),ಅ.27:- ಭಾರತಕ್ಕೆ 2021 ರ ಟಿ 20 ವಿಶ್ವಕಪ್ ಆರಂಭ ಆಘಾತಕಾರಿಯಾಗಿದೆ.  ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ  10 ವಿಕೆಟ್‌ ಗಳ ಸೋಲನ್ನು ಅನುಭವಿಸಬೇಕಾಯಿತು.

ಭಾನುವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ  ಸೋಲು ಕಂಡಿದೆ. ಈ ಸೋಲಿನ ನಂತರ ಭಾರತ ತಂಡದ ಆಯ್ಕೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಭಾರತದ ಮುಂದಿನ ಪಂದ್ಯ ಅಕ್ಟೋಬರ್ 31 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲನುಭವಿಸಿದರೆ ಟೂರ್ನಿಯಿಂದ ಹೊರಬೀಳುವ ಸಂಕಟಗಳು ಎದುರಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಅಂತಹ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗಳಾಗಬಹುದು. ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ ನಲ್ಲಿ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ಸ್ಥಾನ ಅಪಾಯದಲ್ಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಬದಲಿಗೆ ವರುಣ್ ಚಕ್ರವರ್ತಿ ಅವರನ್ನು ಪ್ಲೇಯಿಂಗ್ 11ಗೆ ಸೇರಿಸಲಾಗಿತ್ತು. ನಾಯಕ ವಿರಾಟ್ ಕೊಹ್ಲಿ ಅವರ ಈ ನಿರ್ಧಾರಗಳು ತಪ್ಪು ಎಂದು ಸಾಬೀತಾಗಿದ್ದು, ಇದೀಗ ತಂಡದ ಆಯ್ಕೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಅಕ್ಟೋಬರ್ 31 ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್  3 ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಹಾರ್ದಿಕ್ ಪಾಂಡ್ಯ ಬದಲು ಶಾರ್ದೂಲ್ ಠಾಕೂರ್, ಸೂರ್ಯಕುಮಾರ್ ಯಾದವ್ ಬದಲು ಈಶಾನ್ ಕಿಶಾನ್, ವರುಣ್ ಚಕ್ರವರ್ತಿ ಬದಲು ಆರ್ ಅಶ್ವಿನ್ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: