ಕರ್ನಾಟಕಪ್ರಮುಖ ಸುದ್ದಿ

ಕೆ.ಆರ್ ಎಸ್. ಜಲಾಶಯ ತುಂಬಲು ಒಂದು ಅಡಿಯಷ್ಟೇ ಬಾಕಿ !

ರಾಜ್ಯ(ಮಂಡ್ಯ)ಅ.27:- ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ   ಕೆ.ಆರ್ ಎಸ್. ಜಲಾಶಯಕ್ಕೆ ಹರಿದುಬರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಮಂಗಳವಾರ ಸಂಜೆ ವೇಳೆಗೆ ಜಲಾಶಯದ ನೀರಿನ  ಮಟ್ಟ 123.75 ಅಡಿಗೆ  ತಲುಪಿದ್ದು  ಕೆಆರ್ ಎಸ್  ಜಲಾಶಯ ಭರ್ತಿಯಾಗಲು ಇನ್ನು ಕೇವಲ 1.05 ಅಡಿಯಷ್ಟೇ ಬಾಕಿ ಉಳಿದಿದೆ.

ಮೂರು ದಿನಗಳಿಂದೀಚೆಗೆ ಜಲಾಶಯಕ್ಕೆ 2.5 ಅಡಿ ನೀರು ಹರಿದು ಬಂದಿದೆ.  ಗರಿಷ್ಠ ನೀರಿನ ಮಟ್ಟ 124.80 ಅಡಿ, ಇಂದಿನ ನೀರಿನ ಮಟ್ಟ 123.40 ಅಡಿ, ಗರಿಷ್ಠ ಸಾಮರ್ಥ್ಯ 49.45ಟಿಎಸಿ, ಇಂದಿನ ಒಳಹರಿವು 19.341ಕ್ಯೂಸೆಕ್, ಇಂದಿನ ಹೊರಹರಿವು 3535 ಕ್ಯೂಸೆಕ್  ಇದೆ

ಕೆಆರ್ ಎಸ್   ಜಲಾಶಯದಿಂದ ನದಿಗೆ 20ಸಾವಿರ  ಕ್ಯೂಸೆಕ್ ನೀರು ಹರಿಸಲು ನಿರ್ಧರಿಸಲಾಗಿದ್ದು ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮ ನಿನ್ನೆಯ ಪ್ರಕಟಣೆಯಲ್ಲಿ  ಎಚ್ಚರಿಕೆ ನೀಡಿತ್ತು.  ನದಿಯ ಎರಡೂ ದಂಡೆಯಲ್ಲಿ ವಾಸಿಸುವ ಜನರು ತಮ್ಮ ಪ್ರಾಣ , ಆಸ್ತಿ ಪಾಸ್ತಿ ರಕ್ಷಣೆಮಾಡಿಕೊಳ್ಳುವಂತೆ ಸೂಚನೆ ನೀಡಿತ್ತು.

ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ  ಶ್ರೀರಂಗಪಟ್ಟಣ ತಾಲೂಕು, ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ರದ್ದು ಮಾಡಲಾಗಿದೆ.  (ಎಸ್.ಎಂ)

Leave a Reply

comments

Related Articles

error: