ಕ್ರೀಡೆದೇಶಪ್ರಮುಖ ಸುದ್ದಿ

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತೀಯ ಬಾಕ್ಸರ್ ಗಳು

ದೇಶ(ನವದೆಹಲಿ)ಅ,27:-  ಅನುಭವಿ ಆಟಗಾರ ಶಿವ ಥಾಪಾ (63.5 ಕೆಜಿ) ಎಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ     ಗೆಲುವಿನೊಂದಿಗೆ ಎರಡನೇ ಸುತ್ತಿಗೆ ಪ್ರವೇಶಿಸಿದರೆ, ಟೂರ್ನಿಯ ಚೊಚ್ಚಲ ಆಟಗಾರ ದೀಪಕ್ ಬೊಹ್ರಿಯಾ (51 ಕೆಜಿ) ಮಂಗಳವಾರ  ನಡೆದ ತನ್ನ ಆರಂಭಿಕ ಪಂದ್ಯದಲ್ಲಿ  ಸುಲಭವಾಗಿ ಜಯ ಸಾಧಿಸಿದರು.

ಮೂರನೇ ಬಾರಿಗೆ ವಿಶ್ವ ಚಾಂಪಿಯನ್‌ ಶಿಪ್‌ ನಲ್ಲಿ ಭಾಗವಹಿಸುತ್ತಿರುವ ಐದು ಬಾರಿ ಏಷ್ಯನ್ ಪದಕ ವಿಜೇತ ಶಿವ, ಕೀನ್ಯಾದ ವಿಕ್ಟರ್ ನಿಯಾಡೆರಾ ವಿರುದ್ಧದ  ಮುಖಾಮುಖಿಯಲ್ಲಿ  5-0 ಗೆಲುವು ದಾಖಲಿಸಿದರು.  ಈ ಭಾರತೀಯ ಆಟಗಾರ  ಪಂದ್ಯದ ಸಮಯದಲ್ಲಿ ತನ್ನ ಸಣ್ಣ ನಿಲುವನ್ನು ಅಡ್ಡಿಯಾಗಲು ಬಿಡದೇ ನಿಯಾಡೆರಾ ಮೇಲೆ ಬಲವಾದ ಪ್ರತಿದಾಳಿ ಮಾಡಿದರು. ಏಷ್ಯನ್ ಚಾಂಪಿಯನ್‌ ಶಿಪ್‌ನ ಬೆಳ್ಳಿ ಪದಕ ವಿಜೇತ ದೀಪಕ್ ಅವರು ತಮ್ಮ 16 ನೇ ಸುತ್ತಿನ ಪಂದ್ಯದಲ್ಲಿ ಕಿರ್ಗಿಸ್ತಾನ್‌ ನ ಅಜತ್ ಉಸ್ನಾಲಿವ್ ವಿರುದ್ಧ 5-0 ಅಂತರದಿಂದ ಗೆದ್ದಾಗ ಎದುರಾಳಿ ಬಾಕ್ಸರ್‌ ಗೆ ಯಾವುದೇ ಅವಕಾಶವನ್ನು ನೀಡಲಿಲ್ಲ.

 

ಈ ಟೂರ್ನಿಯಲ್ಲಿ 2015 ರಲ್ಲಿ ಕಂಚಿನ ಪದಕ ಗೆದ್ದಿದ್ದ ಶಿವ, ಅಂತಿಮ 32ರ ಸುತ್ತಿನಲ್ಲಿ ಸಿಯೆರಾ ಲಿಯೋನ್‌ ನ ಜಾನ್ ಬ್ರೌನ್ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯ ಅಕ್ಟೋಬರ್ 30 ರಿಂದ ನಡೆಯಲಿದೆ. ಆದರೆ  ದೀಪಕ್ ಹಾದಿ ಸುಲಭವಲ್ಲ. ಅವರು ನವೆಂಬರ್ 1 ರಂದು ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ ಶಿಪ್ ಕಂಚಿನ ಪದಕ ವಿಜೇತ ಕಝಾಕಿಸ್ತಾನ್‌ ನ ಸಕೆನ್ ಬಿಬೋಸಿನೋವ್ ಅವರನ್ನು ಎದುರಿಸಲಿದ್ದಾರೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: