ಪ್ರಮುಖ ಸುದ್ದಿಮೈಸೂರು

ರಾಜಮಾತೆ ಪ್ರಮೋದಾದೇವಿ ಒಡೆಯರ್ ಜನ್ಮದಿನ: ಶುಭಾಶಯ ತಿಳಿಸಿದ ಯದುವೀರ್

ಮೈಸೂರು, ಅ.27:- ಇಂದು ಮೈಸೂರು ಸಂಸ್ಥಾನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ  ಜನ್ಮದಿನ.  ಈ ಪ್ರಯುಕ್ತ ಅವರ ಪುತ್ರ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು  ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಯದುವೀರ ಅವರು ಮತ್ತವರ ಸುಪುತ್ರ ರಾಜಮಾತೆಯೊಂದಿಗೆ ಇರುವ ಫೋಟೋ ಒಂದನ್ನು ಹಂಚಿಕೊಂಡಿರುವ ಅವರು ನಮ್ಮ ತಾಯಿಯವರಾದ ಮಹಾ ಸನ್ನಿಧಾನ  ಸವಾರಿಯವರು ರಾಜಮಾತೆ ಡಾ.ಪ್ರಮೋದಾದೇವಿ ಒಡೆಯರ್ ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ಅವರಿಗೆ ನಮ್ಮ ಶುಭಾಶಯಗಳನ್ನು ತಿಳಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Leave a Reply

comments

Related Articles

error: