ಮೈಸೂರು

ನೀರಿನಲ್ಲಿ ಈಜಿ ಬಂದ ಹುಲಿ : ವಿಡಿಯೋ ವೈರಲ್

ಮೈಸೂರು,ಅ.27:- ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಹುಲಿಯೊಂದು ಈಜಿ ಬಂದಿದ್ದು ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದ್ದು ಸಖತ್ ವೈರಲ್ ಆಗಿದೆ.

ಬಂಡಿಪುರ ಅರಣ್ಯದಿಂದ ಕಬಿನಿ ಜಲಾಶಯ ದಾಟಿ  ನಾಗರಹೊಳೆಗೆ ಈಜಿ ಬಂದಿದ್ದು ಬೋಟ್ ಸಫಾರಿ ವೇಳೆ  ಪ್ರವಾಸಿಗರಿಗೆ ಕಾಣಸಿಕ್ಕಿದ್ದು ಇದನ್ನು ವಿಡಿಯೋ ಮಾಡಿದ್ದರು. ಇಂತಹ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಸಿಗುವುದು ಅಪರೂಪವಾಗಿದ್ದು ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿಯಲ್ಲಿದ್ದ ಪ್ರವಾಸಿಗರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: