ಕರ್ನಾಟಕಪ್ರಮುಖ ಸುದ್ದಿಮನರಂಜನೆ

ನವೆಂಬರ್ ನಲ್ಲಿ ತೆರೆ ಕಾಣಲಿದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರನ “ಮುಗಿಲ್ ಪೇಟೆ”

ರಾಜ್ಯ(ಬೆಂಗಳೂರು)ಅ.26:-  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸುಪುತ್ರ ಮನುರಂಜನ್   ಅಭಿನಯಿಸಿರುವ “ಮುಗಿಲ್ ಪೇಟೆ” ಸಿನಿಮಾ ನವೆಂಬರ್ 19ರಂದು ತೆರೆ ಕಾಣಲಿದೆ.

ಈ ಕುರಿತು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಹಾಸ್ಯನಟ ಸಾಧುಕೋಕಿಲ್ ಮಾತನಾಡಿ ಸ್ಟಾರ್ ಮಕ್ಕಳ ಸಿನಿಮಾ ಅಂದರೆ ಯಾವ ಸ್ಟಾರ್ ಬೇಕಾದರೂ  ಬರುತ್ತಾರೆ, ಅದರೆ  ಯಾವ ಸ್ಟಾರ್ ನಟರೂ ಇಲ್ಲಿ ಬಂದಿಲ್ಲ. ಕಾರಣ ಎಲ್ಲರಂತೆ ಅವರು ಕೂಡ ಸಿನಿಮಾ ರಂಗದಲ್ಲಿ ಸ್ವತ: ತಾವೇ ಮೇಲೆ ಬರಬೇಕೆಂದು ಅಣ್ಣ, ತಮ್ಮ ಇಬ್ಬರೂ ಸೇರಿ  ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅವರ ತಂದೆಗೆ ಯಾವ ರೀತಿ ಸಾಥ್  ನೀಡಿದ್ದೀರಿ ಅದೇ ರೀತಿ ಅವರ ಮಕ್ಕಳನ್ನೂ ನೀವು ಆಶೀರ್ವದಿಸಿ.  ಇಂದು ನಮ್ಮ ಕನ್ನಡ ಸಿನಿಮಾದ ಕಲಾವಿದರು , ಬೇರೆ ಭಾಷೆಗಳ ಕಡೆ ಹೋಗುತ್ತಿದ್ದಾರೆ ಯಾಕೆಂದರೆ ಬೇರ ಭಾಷೆಯ ಕಲಾವಿದರು ಇಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ, ಹಾಗೆ ಆಗುವುದು ಬೇಡ,  ಈ ಮಣ್ಣಿನಲ್ಲಿ ಹುಟ್ಟಿದ ಕಲಾವಿದರನ್ನು ನೀವು  ಬೆಳೆಸುವ ಕೆಲಸ ಮಾಡಿ ಎಂದು ಹೇಳಿದರು.

ನಾಯಕ ನಟ ಮನುರಂಜನ್  ಮಾತನಾಡಿ  ನನಗೆ ಈಗ ಒಂದು  ಗೆಲುವು ಬೇಕಾಗಿದೆ. ಅದಕ್ಕೆ ನನಗಿಂತ ನನ್ನ ತಂಗಿ, ತಮ್ಮ ಇಬ್ಬರೂ  ತುಂಬ ಕಷ್ಟ ಪಡುತ್ತಿದ್ದಾರೆ, ಹಗಲು ರಾತ್ರಿ ಕಷ್ಟಪಟ್ಟು ಈ ಕಾರ್ಯಕ್ರಮವನ್ನು ನನ್ನ ತಂಗಿ ಗೀತಾಂಜಲಿ ಮಾಡಿದ್ದಾಳೆ.  ನನ್ನ ತಮ್ಮ ವಿಕ್ರಮ್  ನನ್ನ ಗೆಲುವಿಗೋಸ್ಕರ ಬಹಳ ಶ್ರಮಪಡುತ್ತಿದ್ದಾನೆ . ಅಲ್ಲದೆ ನಾನು ಅವನ ಅಭಿಮಾನಿಯಾಗಿದ್ದೇನೆ. ಇಂತಹ  ತಮ್ಮ, ತಂಗಿಯನ್ನು ಪಡೆದ  ನಾನು ತುಂಬ ಪುಣ್ಯವಂತ ಎಂದರು.

ಸಂಗೀತ ನಿರ್ದೇಶಕ ಸಂಭ್ರಮ್ ,ವಿ, ಶ್ರೀಧರ್, ಮಾತನಾಡಿ  ಮುಗಿಲ್ ಪೇಟೆ ಚಿತ್ರ ತುಂಬ ಸೊಗಸಾಗಿ ಮೂಡಿ ಬಂದಿದೆ,  ಅದಕ್ಕೆ  ಕಾರಣ ನಿರ್ದೇಶಕ  ಭರತ್ ಬಹಳ  ಶ್ರಮಪಟ್ಟಿದ್ದಾರೆ.  ಎಲ್ಲರಿಗೂ ಇಷ್ಟ ಅಗುವ  ವಿಚಾರಗಳು ಇದರಲ್ಲಿದೆ.  ರವಿಚಂದ್ರನ್ ಅವರನ್ನು ನೋಡಿ ತುಂಬ ಜನ ಸಿನಿಮಾ ರಂಗಕ್ಕೆ  ಬಂದಿದ್ದಾರೆ,  ಅದರಲ್ಲಿ ನಾನು ಒಬ್ಬ ಎಂದರು.

ಈ ಚಿತ್ರದಲ್ಲಿ ‘ಟಗರು’ ಖ್ಯಾತಿಯ ನಟ ಕಾಕ್ರೋಚ್​ ಸುಧಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಮನು ಸಲುವಾಗಿ ಅವರ ಸಹೋದರ ವಿಕ್ರಮ್​ ರವಿಚಂದ್ರನ್​ ಸಾಕಷ್ಟು ಶ್ರಮಪಡುತ್ತಿದ್ದಾರೆ. ಅದನ್ನು ನೋಡಿದ ಸುಧಿ ಅವರು ‘ಕನಸುಗಾರ’ ಸಿನಿಮಾದ ಪಾತ್ರಗಳನ್ನು ಈ ಸಂದರ್ಭದಲ್ಲಿ  ನೆನಪಿಸಿಕೊಂಡರು.

ಭರತ್​ ನಾವುಂದ ನಿರ್ದೇಶನ ಮಾಡಿರುವ ‘ಮುಗಿಲ್​ಪೇಟೆ’ ಚಿತ್ರದಲ್ಲಿ ಮನುಗೆ ಜೋಡಿಯಾಗಿ ಖಯಾದು ಲೋಹರ್​ ನಟಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ, ಕಾವ್ಯಾ ಶಾ, ತಾರಾ ಅನುರಾಧ, ಮೇಘಶ್ರೀ ಮುಂತಾದವರು ಕಾಣಿಸಿಕೊಂಡಿದ್ದಾರೆ.  17 ಗೆಟಪ್​ ಗಳಲ್ಲಿ ಸಾಧು ಕೋಕಿಲ ಕಾಣಿಸಿಕೊಂಡಿದ್ದಾರೆ. ರಕ್ಷಾ ವಿಜಯ್​ ಕುಮಾರ್​ ಮತ್ತು ಮೋತಿ ಮಹೇಶ್​ ನಿರ್ಮಾಣ ಮಾಡಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: