ಮೈಸೂರು

ಪತಿಯ ವರದಕ್ಷಿಣೆ ದಾಹಕ್ಕೆ ನವವಿವಾಹಿತೆ ಬಲಿ

ಮೈಸೂರು,ಅ.27:- ಪತಿಯ ವರದಕ್ಷಿಣೆ ದಾಹಕ್ಕೆ ಬೇಸತ್ತ  ನವವಿವಾಹಿತೆ ನೇಣಿಗೆ ಶರಣಾದ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.

ಮೃತರನ್ನು ದಿವ್ಯಾ(23) ಎಂದು ಹೇಳಲಾಗಿದೆ. ದಿವ್ಯಾ  ಟಿ.ಮರಳ್ಳಿ ಗ್ರಾಮದವರಾಗಿದ್ದು, ಒಂಭತ್ತು ತಿಂಗಳ ಹಿಂದಷ್ಟೇ ಟಿ.ನರಸೀಪುರದ ದೀಪಕ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಬೆಂಗಳೂರಿನಲ್ಲಿ ಹಸು ಸಾಕಿಕೊಂಡಿದ್ದ ದೀಪಕ್ ಮದುವೆ ನಂತರ ಟಿ.ನರಸೀಪುರದಲ್ಲಿಯೇ ನೆಲೆಸಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ದೀಪಕ್ ತನ್ನ ತಂದೆಗೆ ಆಸ್ತಿ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ. ಈ ವಿಚಾರದಲ್ಲಿ ಆಗಾಗ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ. ದಾರಿ ತಪ್ಪಿದ್ದ ಮಗನಿಗೆ ಆಸ್ತಿ ಕೊಡಲು ತಂದೆ ನಿರಾಕರಿಸಿದ್ದರು. ಇದರಿಂದ ಮತ್ತಷ್ಟು ಕುಡಿತದ ಚಟಕ್ಕೆ ಬಲಿಯಾಗಿ ಪತ್ನಿಗೆ ಕಿರುಕುಳ ಕೊಡುತ್ತಿದ್ದ. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಲು ಶುರು ಮಾಡಿದ್ದ. ಗಂಡನ ಕಿರುಕುಳಕ್ಕೆ ಬೇಸತ್ತ ದಿವ್ಯಾ ನೇಣಿಗೆ ಶರಣಾಗಿದ್ದಾಳೆ.

ದಿವ್ಯಾ ಪೋಷಕರು ಪತಿ,ಅತ್ತೆ,ಮಾವ,ನಾದಿನಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: