ಮೈಸೂರು

ಲೈಫ್  ಇಸ್  ಕಾಲಿಂಗ್  ಕ್ರೀಡಾ ಸಂಸ್ಥೆಯ ವತಿಯಿಂದ ಮ್ಯಾರಾಥಾನ್

ಮೈಸೂರು , ಅ. 27 :  ಲೈಫ್  ಇಸ್  ಕಾಲಿಂಗ್  ಕ್ರೀಡಾ ಸಂಸ್ಥೆಯ ವತಿಯಿಂದ  11ನೇ ಆವೃತ್ತಿಯ ಮ್ಯಾರಾಥಾನ್ ಸಂಭ್ರಮಾಚರಣೆಯ ಸರಣಿ ನವೆಂಬರ್ 11ರಂದು ನಡೆಯಲಿದೆ.

ಈ ಕುರಿತು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಲೈಫ್ ಇಸ್ ಕಾಲಿಂಗ್ ಕ್ರೀಡಾ  ವ್ಯವಸ್ಥಾಪಕ  ಸಂಸ್ಥೆಯ  ಸಹೋದ್ಯೋಗಿ  ರವಿ  ಮಾತನಾಡಿ ಮೈಸೂರು ಅರಮನೆಯ ಬಲರಾಮ ಗೇಟ್  ಬಳಿ ನವೆಂಬರ್ 14 ರಂದು  ಬೆಳಿಗ್ಗೆ 4.45ಕ್ಕೆ ಸರಿಯಾಗಿ ಪ್ರಾರಂಭವಾಗಲಿದೆ.  ಇದರಲ್ಲಿ 42.2.ಕಿಮೀ , 30 ಕಿಮೀ. ನ  ಅರ್ಧ  ಮ್ಯಾರಾಥಾನ್ , 30 ಕಿಮೀನ ಓಟಗಳಿದ್ದು ಇದು ಸ್ಪರ್ಧಾತ್ಮಕ  ರೀತಿಯದ್ದಾಗಿರುತ್ತದೆ.   ಭಾರತಾದ್ಯಂತ ಇರುವ ಯಾರಾದರೂ ಭಾಗವಹಿಸಬಹುದು. 5 ಕಿಮೀ ನ ಒಂದು ಸಂತೋಷಕರವಾದ ಓಟವೂ ಇದ್ದು   ಇದು ಸ್ಪರ್ಧಾತ್ಮಕವಾಗಿರುವುದಿಲ್ಲ, ಈ ಕಾರ್ಯಕ್ರಮವು  ಕೇವಲ ರಾಜ್ಯದಾದ್ಯಂತ ಇರುವ ಹೆಚ್ಚು ಹೆಚ್ಚು ಆಸಕ್ತರನ್ನು ಆಕರ್ಷಿಸುವುದಕ್ಕಾಗಿ ಮಾತ್ರ ಇರುತ್ತದೆ. ಇದು  ಆರೋಗ್ಯವಂತ ಜೀವನಕ್ಕೂ ಸಹಾಯ ಮಾಡುತ್ತದೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು  www.eventzalley.com  ಇದಕ್ಕೆ  ಲಾಗ್ ಆಗಿ ಅಥವಾ 9660622006 ಇದಕ್ಕೆ ಕರೆಮಾಡಬಹುದು. ಇ-ಮೈಲ್ ವಿಳಾಸ  [email protected]   ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ‘ ಅಥ್ಲೆಟಿಕ್ಸ್ ಅಸೋಸಿಯೇಷನ್ ’ ನ ಸಹಕಾರವಿರುತ್ತದೆ. 10 ಕಿಮೀ  ಓಟಕ್ಕೆ ‘ಏರಿಸ್ ಗ್ಲೋಬಲ್ ’ ಇವರ  ಪ್ರಾಯೋಜಕತ್ವ ಮತ್ತು ‘ಥಾಟ್ ಪೋಕಸ್ ಟೆಕ್ನಾಲಜೀಸ್ ’ ಇವರ ಸಹಪ್ರಾಯೋಜಕತ್ವವಿರಲಿದೆ.

ಲೈಫ್ ಇಸ್ ಕಾಲಿಂಗ್   ಸಂಸ್ಥೆಯು ಸೈಕ್ಲಿಂಗ್, ಮ್ಯಾರಾಥಾನ್ ಮುಂತಾದ ಕ್ರೀಡೆಗಳನ್ನು ಆಯೋಜನೆ ಮಾಡುವ ಸಂಸ್ಥೆಯಾಗಿದ್ದು. ಕರ್ನಾಟಕದ  ಐವತ್ತಕ್ಕೂ ಹೆಚ್ಚು ಮ್ಯಾರಾಥಾನ್  ಓಟದ  ಕಾರ್ಯಕ್ರಮಗಳನ್ನು  ಬೆಂಗಳೂರು , ಮೈಸೂರು, ಮಂಗಳೂರುಗಳಲ್ಲಿ  ಆಯೋಜಿಸಿದೆ. ಇದು 10ಕಿಮೀ ಓಟ , 5 ಕಿಮೀ ಓಟ,  ಬೆಂಗಳೂರಿನಲ್ಲಿ 4 ಕಾರ್ಪೋರೇಟ್  ರಿಲೇ ಇವುಗಳನ್ನು ನಡೆಸಿಕೊಟ್ಟಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: