ಪ್ರಮುಖ ಸುದ್ದಿಮನರಂಜನೆವಿದೇಶ

ಹಾಲಿವುಡ್ ನಟ ಜೇಮ್ಸ್ ಮೈಕೆಲ್ ಟೈಲರ್ ನಿಧನ

ದೇಶ(ನವದೆಹಲಿ)ಅ.27:- ಹಾಲಿವುಡ್‌ ನ ಪ್ರಸಿದ್ಧ 90 ರ ಟಿವಿ ಶೋ ಫ್ರೆಂಡ್ಸ್‌ ನಲ್ಲಿ ಗುಂಥರ್ ಪಾತ್ರವನ್ನು ನಿರ್ವಹಿಸಿದ್ದ ನಟ ಜೇಮ್ಸ್ ಮೈಕೆಲ್ ಟೈಲರ್ ನಿಧನರಾಗಿದ್ದಾರೆ.

ಅವರಿಗೆ ಕೇವಲ 59 ವರ್ಷ ವಯಸ್ಸಾಗಿತ್ತು. 59ನೇ ವರ್ಷದಲ್ಲಿಯೇ  ಜೇಮ್ಸ್ ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. 2018 ರಲ್ಲಿ, ಜೇಮ್ಸ್‌ ಅವರಿಗೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿರುವುದು ಪತ್ತೆಯಾಗಿತ್ತು.  ಅವರು ಜೂನ್‌ ನಲ್ಲಿ ಕಿಮೋಥೆರಪಿಗೆ ಒಳಗಾಗಿದ್ದರು. ಈ ವರ್ಷದ ಫ್ರೆಂಡ್ಸ್‌ ಕಾರ್ಯಕ್ರಮದಲ್ಲಿ  ಜೇಮ್ಸ್ ಜೂಮ್ ಮೂಲಕ ಸಂಪರ್ಕ ಹೊಂದಿದ್ದರು. ಬ್ರೈಟ್ ಟ್ವೀಟ್ ಮಾಡಿದ್ದು, ‘ನಮ್ಮ ಗುಂಥರ್ ಜೇಮ್ಸ್ ಮೈಕೆಲ್ ಟೈಲರ್   ನಿಧನರಾದರು. ಅವರು ತಮ್ಮ ಕೊನೆಯ ದಿನಗಳಲ್ಲಿಯೂ  ಇತರರಿಗೆ ಸಹಾಯ ಮಾಡುವ ಅದ್ಭುತ ವ್ಯಕ್ತಿಯಾಗಿದ್ದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಗುಂಥರ್ ಚಿರಕಾಲ ಇರಲಿದ್ದಾರೆ’ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: