ಮೈಸೂರು

ಜೀವನದಲ್ಲಿ ಉದ್ದೇಶವಿದ್ದರೆ ಸುಲಭವಾಗಿ ಗುರಿ ತಲುಪಲು ಸಾಧ್ಯ : ಅಮರನಾಥ್ . ಕೆ.ಕೆ

ಮೈಸೂರು,ಅ.27:-  ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಇಂದು ‘ದತ್ತು ಕಾನೂನು’ (ಲಾ ಆಫ್ ಅಡಾಪ್ಶನ್)ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ    ಮೈಸೂರು ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಮರನಾಥ್ . ಕೆ.ಕೆ ಮಾತನಾಡಿ  “ವಿದ್ಯಾರ್ಥಿ ಜೀವನದಲ್ಲಿ ಯವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗದ ರೀತಿಯಲ್ಲಿ ವಿದ್ಯಾರ್ಥಿ ಜೀವನವನ್ನು ಅರ್ಥಬದ್ಧವಾಗಿ ರೂಪಿಸಿಕೊಳ್ಳಬೇಕು ಎಂದರು.

ನಂತರ ವಿದ್ಯಾರ್ಥಿನಿಯರೊಂದಿಗೆ ಕಾನೂನಿನ ಅರಿವಿನ ಬಗ್ಗೆ ಮುಕ್ತ ಸಂವಾದವನ್ನು ನಡೆಸಲಾಯಿತು. ಜೀವನದಲ್ಲಿ ಉದ್ದೇಶವಿದ್ದರೆ ಸುಲಭವಾಗಿ ಗುರಿ ತಲುಪಲು ಸಾಧ್ಯವಾಗುತ್ತದೆ”ಎಂದು  ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ, ಮಾಜಿ ಸೈನಿಕ  ಶಿವನಂಜಪ್ಪ ಮಾತನಾಡಿ   “ದತ್ತು ಸ್ವೀಕಾರ ಮತ್ತು ಕಾನೂನು ಅರಿವಿನ ಬಗ್ಗೆ ತಿಳಿಸಿದರು.  ವಿದ್ಯಾರ್ಥಿ ಜೀವನದಲ್ಲಿ ಗುರಿ ಮತ್ತು ಗುರುವಿದ್ದರೆ ಸಾಧನೆ ಸಾಧ್ಯವಾಗುತ್ತದೆ. ಮನಸ್ಸಿನಲ್ಲಿ ಯಾವುದೇ ಗೊಂದಲವಿಲ್ಲದೆ ಆತ್ಮ ವಿಶ್ವಾಸದಿಂದ ಓದಿದರೆ ಗುರಿ ಮುಟ್ಟಲು ಸುಲಭ. ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರಬೇಕು. ವಿದ್ಯಾರ್ಥಿ ಜೀವನವು ಅಮೂಲ್ಯವಾದುದು. ದೇಶಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿಗಳು ನಿಜವಾಗಬೇಕೆಂದು” ತಿಳಿಸಿದರು.

ಈ ದತ್ತು ಕಾನೂನು 1950ರಲ್ಲಿ ಜಾರಿಗೆ ಬಂದಿತು. ಇದರಲ್ಲಿ 15, 16,17ನೇ ಸೆಕ್ಷನ್‍ ಗಳು ಪ್ರಮುಖವಾದವು. ಸೆಕ್ಷನ್ 11ರಲ್ಲಿ ಒಂದು ಗಂಡು ಮಗುವನ್ನು ದತ್ತಕ ಪಡೆದುಕೊಳ್ಳಬೇಕೆಂದರೆ ತಾಯಿ ಮತ್ತು ಮಗುವಿನ ನಡುವೆ 21 ವರ್ಷಗಳ ಅಂತರವಿರಬೇಕು. ಒಟ್ಟು 30 ಸೆಕ್ಷನ್‍ಗಳಿವೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಶಾರದ ವಹಿಸಿದ್ದರು. ಈ ಸಂದರ್ಭ  ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಉಪ ಪ್ರಾಂಶುಪಾಲರಾದ ಡಾ. ಜಿ. ಪ್ರಸಾದಮೂರ್ತಿ , ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಹೇಮಾವತಿ ಕೆ.ಎಂ.  ಮತ್ತಿತರರು ಉಪಸ್ಥಿತರಿದ್ದರು.

ಮಮತ ಪ್ರಾರ್ಥಿಸಿದರು. ಪವಿತ್ರ ಸ್ವಾಗತಿಸಿದರು.   ನಿಖಿತಾ ಬಿ.ಎಸ್.  ಕಾರ್ಯಕ್ರಮವನ್ನು ನಿರೂಪಿಸಿದರು. ಸ್ನೇಹ   ವಂದಿಸಿದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: