Uncategorized

 ಕನ್ನಡ ರಾಜ್ಯೋತ್ಸವ ಒಂದು ದಿನದ ಆಚರಣೆಯಲ್ಲ, ಪ್ರತಿನಿತ್ಯದ ಆಚರಣೆಯಾಗಬೇಕು :ಹೇಮಂತ್ ಕುಮಾರ್ ಗೌಡ

ಮೈಸೂರು,ಅ.27:- 66ನೇ  ಕನ್ನಡ ರಾಜ್ಯೋತ್ಸವದ ಅಂಗವಾಗಿ ಪರಿಸರ ಸ್ನೇಹಿ ಬಳಗ ಹಾಗೂ ಕೆಎಂಪಿಕೆ ಟ್ರಸ್ಟ್ ವತಿಯಿಂದ ಆಯೋಜಿಸಿರುವ  ಬನ್ನಿ ನಮ್ಮ ಸಂಗಡ ಕನ್ನಡ ಭಾಷಣ ಸ್ಪರ್ಧೆ 2021ರ ಪ್ರಚಾರದ  ಸಾಮಗ್ರಿಯನ್ನು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಅವರು   ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಇದು ಒಂದು ದಿನದ ಆಚರಣೆಯಲ್ಲ. ಪ್ರತಿನಿತ್ಯದ ಆಚರಣೆಯಾಗಬೇಕು.  ಆಚರಣೆ ಎಂದಾಕ್ಷಣ ಸಕತ್ ಆರ್ಕೆಸ್ಟ್ರಾ ಮಾಡ್ಸೋದ್ ಅಲ್ಲ ಕನ್ನಡ ಬಾರದ ಕನ್ನಡಾಭಿಮಾನಿಗೆ ಕನ್ನಡ ಗೊತ್ತಿದ್ದೂ ಗತ್ತು ತೋರ್ಸೋ ಅಹಂಕಾರಿಗಳಿಗೆ,ಕನ್ನಡ ನಾಡಿನಲ್ಲಿ  ಇದ್ದು ಕನ್ನಡ ನಾಡ ಅನ್ನ ನೀರು ಸೇವಿಸಿ ಕನ್ನಡವನ್ನು ಕಲಿಯುವ ಕನಿಷ್ಠ ಪ್ರಜ್ಞೆ ಇರಲಿ ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ ಎಂದರು.

ಆಟೋ, ಮಾಲ್ , ಬಸ್ಸು , ಹೋಟೆಲ್ ಎಲ್ಲರೂ ಅದರಲ್ಲೂ ಈ ಉತ್ತರ ಭಾರತೀಯ ಟೆಕ್ಕಿಗಳೊಟ್ಟಿಗೆ ಹೆಚ್ಚೆಚ್ಚು ಕನ್ನಡವನ್ನೇ ಮಾತಾಡಬೇಕು ಅನ್ನೋದನ್ನು ದಯವಿಟ್ಟು ಮರೆಯಬೇಡಿ ಎಂದು ತಿಳಿಸಿದರು.

ಈ ಭಾಷಣ ಸ್ಪರ್ಧೆಯಲ್ಲಿ 3 ನಿಮಿಷಗಳ ತುಣುಕು (ವಿಡಿಯೋ) ವನ್ನು ಮೊ.ಸಂ. 8105078070/9880752727 ಈ ಸಂಖ್ಯೆಗೆ  ಕಳಿಸಿಕೊಡಬೇಕು. ಸ್ಪರ್ಧಿಗಳ ವಯೋಮಿತಿ 8ವರ್ಷದಿಂದ 18ವರ್ಷದೊಳಗೆ ಇರಬೇಕು ,ಕನ್ನಡದ ವಿಷಯ ಬಗ್ಗೆ ಹಾಗೂ ಇತಿಹಾಸ ಅಥವಾ ಯಾವುದಾದರೂ ಕನ್ನಡದ ವಿಚಾರದ ಬಗೆ ಸ್ಪಷ್ಟವಾಗಿ ಶುದ್ಧ ಕನ್ನಡ  ಭಾಷಣ ಮಾಡಿ ಕಳಿಸಬೇಕು. ಇತರೆ ಯಾವುದೇ ಭಾಷೆ ಬಳಸುವಂತಿಲ್ಲ ,ಸ್ಪರ್ಧಿಗಳ ಭಾಷಾಶೈಲಿ, ಸಂವಹನ ಕೌಶಲ್ಯ ,ಸ್ಪಷ್ಟತೆ ಆಧಾರದ ಮೇಲೆ ಬಹುಮಾನ ನೀಡಲಾಗುವುದು.

ಮೊದಲನೇ ಬಹುಮಾನ   3000ರೂ.ನಗದು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ಪಾರಿತೋಷಕ ನೀಡಲಾಗುವುದು ,ದ್ವಿತೀಯ ಬಹುಮಾನ 2000ರೂ ನಗದು ,ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ಪಾರಿತೋಷಕ,ತೃತೀಯ ಬಹುಮಾನ 1000ರೂ,ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ಪಾರಿತೋಷಕ ನೀಡಲಾಗುವುದು. ಸ್ಪರ್ಧಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು.

ಈ ಸಂದರ್ಭ ಡಿ ಲೋಹಿತ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್, ಸಮಾಜ ಸೇವಕರಾದ ಅಜಯ್ ಶಾಸ್ತ್ರಿ, ಹಿರಿಯ ರಂಗಭೂಮಿ ಕಲಾವಿದರಾದ ಶಿವಮಲ್ಲು, ಬ್ರಾಹ್ಮಣ ಮಹಾಸಭಾ ಯುವ ಬಳಗ ನಿರ್ದೇಶಕರಾದ ಸುಚೀಂದ್ರ, ಬಿಜೆಪಿ ಮುಖಂಡರಾದ ನಂದೀಶ್, ಮಂಜು ಸಿ ಗೌಡ, ಸಮಾಜ ಸೇವಕರಾದ ಹರ್ಷ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: