ಮೈಸೂರು

ರಸ್ತೆಗಳೆಲ್ಲ ಅಪಾಯದ ಗುಂಡಿಗಳು : ಜಿಲ್ಲಾಡಳಿತ-ಪಾಲಿಕೆ ವಿರುದ್ಧ ಪ್ರತಿಭಟನೆ

ಮೈಸೂರು,ಅ.27:- ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ದೊಡ್ಡಮೋರಿಗಳು,ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವ ಹಾಗೂ ಕ್ಷೇತ್ರದೆಲ್ಲೆಡೆ ರಸ್ತೆಗಳೆಲ್ಲವೂ ಅಪಾಯದ ಗುಂಡಿಗಳಾಗಿ ಮಾರ್ಪಾಟಾಗಿರುವುದನ್ನು ಮನಗಂಡು ಮಾದರಿ ಕ್ಷೇತ್ರದ ದುರಂತಗಳನ್ನು ವಿರೋಧಿಸಿ ಜಿಲ್ಲಾಡಳಿತ,ಪಾಲಿಕೆ ವಿರುದ್ಧ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರ ನೇತೃತ್ವದಲ್ಲಿ ಹಾಗೂ ವಿವಿಧ ಬಡಾವಣೆಗಳ ತೊಂದರೆಗೊಳಗಾದ ನಾಗರೀಕರ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ   ಮಳೆ ನೀರು ತುಂಬಿ ಜನರು ಪಡಬಾರದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು ಉಪಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಯಾರೂ ನಮ್ಮ ಕಷ್ಟಗಳನ್ನು ಕೇಳಲು ಬಂದಿಲ್ಲವೆಂದು ಆರೋಪಿಸಿದರು.

ಅಷ್ಟೇ ಅಲ್ಲದೆ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಬಿದ್ದಿದ್ದು ಪ್ರಾಣಕ್ಕೆ ಸಂಚಕಾರವಾಗುವ ಅಪಾಯವಿದೆ. ರಸ್ತೆ ದುರಸ್ತಿ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲವೆಂದು ಆರೋಪಿಸಿ, ಶೀಘ್ರ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಹೊಂಡಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: