ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ಪಕ್ಷ ಎಲ್ಲರ ಪರವಾಗಿದೆ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ರಾಜ್ಯ(ಸಿಂದಗಿ ) ಅ. 27 :- ಕಂಬಳಿ ಕುರಿತು ನಾನು ರಾಜಕೀಯದಲ್ಲಿ ಮಾತನಾಡಿಲ್ಲ, ಆರಂಭಿಸಿದ್ದು ಬಸವರಾಜ ಬೊಮ್ಮಾಯಿ ಅವರೇ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಇಂದು ಗೋಷ್ಠಿಯಲ್ಲಿ ಮಾತನಾಡಿದ ಅವರು , ಕಾಂಗ್ರೆಸ್ ಗೆ ಅಲ್ಪಸಂಖ್ಯಾತರ ಮತ ಸಾಕು ಎಂದಿರುವ ಮುಖ್ಯಮಂತ್ರಿ ಎಸ್ . ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿ ಕ್ರಿಯೆ ನೀಡಿ ಕಾಂಗ್ರೆಸ್ ಪಕ್ಷ ಎಲ್ಲ ಜನರ,ಎಲ್ಲ ಧರ್ಮದ ಪರವಾಗಿ ಇರುವುದು. ನಾನು ಅನ್ನಭಾಗ್ಯ , ಕ್ಷೀರ ಭಾಗ್ಯ , 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ , ಶೂ ಭಾಗ್ಯ ,ಇಂದಿರಾ ಕ್ಯಾಂಟಿನ್, ಇವೆಲ್ಲ ಮಾಡಿರುವು ಬರಿ ಅಲ್ಪ ಸಂಖ್ಯಾತರಿಗೆ ಮಾತ್ರನಾ, ಸುಮ್ಮನೆ ಪೆದ್ದರ ಹಾಗೆ ಮಾತನಾಡಬಾರದು . ಫುಡ್ ಸೆಕ್ಯೂರಿಟಿ ಆಕ್ಟ್ ತಂದಿದ್ದು , ಮನಮೋಹನ್ ಸಿಂಗ್ ಅವರ ಅಥವಾ ಮೋದಿನಾ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರದಲ್ಲಿ ಇರುವ ಬೇರೆ ರಾಜ್ಯಗಳಲ್ಲಿ ಯಾಕೆ ಉಚಿತವಾಗಿ ಅಕ್ಕಿ ಕೊಡುವುದಿಲ್ಲ ಎಂದು ಪ್ರಶ್ನಿಸಿದರು.
ನಾನು ಅಧಿಕಾರದಲ್ಲಿ ಇರುವಾಗ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ಕೊಟ್ಟಿದ್ದೇನೆ, ರೈತರ ಸಾಲ ಮನ್ನಾ ಮಾಡಿದೆ, ಕೃಷಿಭಾಗ್ಯ ಮಾಡಿದೆ, ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಮಾಡಿದೆ ಎಂದು ತಾವು ಮಾಡಿರುವ ಕೆಲಸಗಳನ್ನು ನೆನಪಿಸಿದರು. ಸಿದ್ದರಾಮಯ್ಯ ಸ್ವಾಮಿಜಿಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂಬ ಬಿಜೆಪಿ ಯ ಆರೋಪಕ್ಕೆ ಪ್ರತಿಕ್ರಿಯಿಸಿ ನಾನು ಸ್ವಾಮಿಜೀಗಳ ಬಗ್ಗೆ ಮಾತನಾಡುವುದೆ ಇಲ್ಲ, ಅವರು ಬರಿ ಸುಳ್ಳನ್ನೆ ಹೇಳುತ್ತಾರೆ, ಎಂದು ಕಿಡಿ ಕಾರಿದರು.
ಸಿಂದಗಿ ಮತ್ತು ಹಾನಗಲ್ ನ ಉಪ ಚುನಾವಣೆಯ ಕೊನೆಯದಿನದ ಪ್ರಚಾರದ ಕುರಿತು ಮಾತನಾಡಿ , ನಮ್ಮ ನಿರೀಕ್ಷೆಗೂ ಮೀರಿ ಮತದಾರರಿಂದ ನಮ್ಮ ಪರವಾದ ಒಳ್ಳೆಯ ಪ್ರತಿಕ್ರಿಯೆ ಎಲ್ಲ ಹಳ್ಳಿಗಳಲ್ಲಿ ,ಸಿಂದಗಿ ಪಟ್ಟಣದಲ್ಲಿ ಬರುತ್ತಿದೆ, ಜಿಲ್ಲೆಯ ನಮ್ಮ ಎಲ್ಲ ಮುಖಂಡರುಗಳು , ಕಾರ್ಯಕರ್ತರು , ಶಾಸಕರು , ಅವರು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ, ಮತದಾರರ ಮನ ಒಲಿಸುವ ಕೆಲಸ ಮಾಡಿದ್ದಾರೆ. ಎಲ್ಲ ಕಡೆ ಕಾಂಗ್ರೆಸ್ ಪರ ಅಲೆ ಇದೆ ,ಕಳೆದ ಎರಡುಕಾಲು ವರ್ಷದಿಂದ ಏನು ಅಭಿವೃದ್ಧಿ ಮಾಡಿದ್ದೇವೆ ಅಂತ ಹೇಳಲು ಬಿಜೆಪಿ ಅವರ ಹತ್ತಿರ ಏನು ಇಲ್ಲ, ಕೇಂದ್ರದಲ್ಲಿ ಇರುವ ನರೇಂದ್ರ ಮೋದಿ ಸರ್ಕಾರ ಜನ ವಿರೋಧಿ ಸರ್ಕಾರ , ಬೆಲೆ ಏರಿಕೆ ಈ ದಿನ ಗಗನ ಮುಟ್ಟಿದೆ ,ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ, ಅವರ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಜೆಡಿಎಸ್ ನವರು ಏನೇ ಹೇಳಿದರೂ ಅವರು ಈ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ , ಇನ್ನೂ ಅಲ್ಪ ಸಂಖ್ಯಾತರು ಯಾವ ಪಕ್ಷ ಸಂವಿಧಾನ ಉಳಿಸುತ್ತದೆ ಆ ಪಕ್ಷಕ್ಕೆ ಮಾತ್ರ ಮತ ನೀಡುತ್ತಾರೆ ಎಂದರು.
ನಮ್ಮ ಸರ್ಕಾರದ ಸಾಧನೆಗಳು , ಮನಮೋಹನ್ ಸಿಂಗ್ ಸರ್ಕಾರದ ಸಾಧನೆಗಳನ್ನು ಜನರು ನೆನೆಯುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ಜನರ ಅಭಿಪ್ರಾಯ, ಆದ್ದರಿಂದ ನಾವು ಸಿಂದಗಿ ಮತ್ತು ಹಾನಗಲ್ ಎರಡೂ ಕಡೆ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯ ಸುನಾಮಿ ಇದೆ ಎಂಬ ಮಾತಿಗೆ ಸುನಾಮಿ ಎಂದರೆ ಏನು , ಬಿಜೆಪಿ ಅವರ ಅಭಿವೃದ್ಧಿಯ ಕೆಲಸವೇನು , ಸಿಂದಗಿಯ ರಸ್ತೆಯನ್ನು ನೋಡಿದ್ದೀರ, ಈಗ ಸಿಂದಗಿಯಲ್ಲಿ ಯಾರ ಅಧಿಕಾರವಿತ್ತು , ಬಿಜೆಪಿಯ ಅಭಿವೃದ್ಧಿಯ ಕೆಲಸಗಳ ಬಗ್ಗೆ ಬೊಮ್ಮಾಯಿ ಅವರು ಉತ್ತರಿಸಲಿ, ಇನ್ನೂ ಕಂಬಳಿ ವಿಚಾರಕ್ಕೆ ಬಂದರೆ ನಾನು ಅದನ್ನು ಆರಂಭಿಸಿಲ್ಲ , ಬೊಮ್ಮಾಯಿ ಅವರ ತಂದೆ ಶಾಸಕರಾಗಿದ್ದರು , ವಿರೋಧ ಪಕ್ಷದ ನಾಯಕರಾಗಿದ್ದರು , ಹೀಗಿರುವಾಗ ಅವರು ಕುರಿ ಕಾಯಲು ಹೇಗೆ ಸಾಧ್ಯ, ಬರಿ ಸುಳ್ಳನ್ನೇ ಹೇಳುವುದಲ್ಲ , ನಾನು ಇದುವರೆಗೂ ಕಂಬಳಿ ಬಗ್ಗೆ ಯಾವತ್ತೂ ರಾಜಕೀಯದಲ್ಲಿ ಮಾತನಾಡಿರಲಿಲ್ಲ . ಬಸವರಾಜ ಬೊಮ್ಮಾಯಿ ಅವರೇ ಆರಂಭಿ ಸಿದ್ದು ಎಂದರು.
ನಾನು ಕುಮಾರ ಸ್ವಾಮಿಯವರ ಯಾವುದೆ ಮಾತಿಗೆ ಪ್ರತಿಕ್ರಿಸಲ್ಲ ಯಾಕೆಂದರೆ ಅವರು ದೊಡ್ಡ ಸುಳ್ಳಗಾರ ಎಂದರು (ಎಸ್.ಎಂ).

Leave a Reply

comments

Related Articles

error: