ಸುದ್ದಿ ಸಂಕ್ಷಿಪ್ತ

ಯೋಗನಡಿಗೆ ಕಾರ್ಯಕ್ರಮ

ಯೋಗದಸರಾ ಉಪಸಮಿತಿಯ ವತಿಯಿಂದ ಅ. 2 ರಂದು ಬೆ.7 ಗಂಟೆಗೆ ಹಮ್ಮಿಕೊಂಡಿರುವ ಯೋಗನಡಿಗೆ ಕಾರ್ಯಕ್ರಮಕ್ಕೆ  ಲೋಕೋಪಯೋಗಿ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಹೆಚ್.ಸಿ ಮಹದೇವಪ್ಪ ಚಾಲನೆ ನೀಡಲಿದ್ದಾರೆ.

ಸಮಾಜ ಕಲ್ಯಾಣ ಇಲಾಖಾ ಸಚಿವ ಹೆಚ್.ಆಂಜನೇಯ ಉದ‍್ಘಾಟನೆ ಮಾಡಲಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ತನ್ವೀರ್ ಸೇಠ್, ಮೇಯರ್ ಬೆ.ಎಲ್, ಭೈರಪ್ಪ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.

Leave a Reply

comments

Related Articles

error: