ಮೈಸೂರು

ಚಾಮರಾಜ ಕ್ಷೇತ್ರದ ಮಳೆ ಹಾನಿ ಸಂಬಂಧ ಸಭೆ ನಡೆಸಿದ ಶಾಸಕರು

ಮೈಸೂರು,ಅ.28:- ಮೈಸೂರಿನಲ್ಲಿ ಮಳೆರಾಯನ ಆರ್ಭಟಕ್ಕೆ ಹಲವು ಪ್ರದೇಶಗಳು ಹಾನಿಗೊಳಗಾಗಿದ್ದು, ಚಾಮರಾಜ ಕ್ಷೇತ್ರದ ಮಳೆ ಹಾನಿ ಸಂಬಂಧ ಶಾಸಕ ಎಲ್.ನಾಗೇಂದ್ರ ಸಭೆ ನಡೆಸಿದ್ದಾರೆ.

ಪಾಲಿಕೆಯ ಸದಸ್ಯರಿಂದ ಮಳೆ ಹಾನಿಯ ಕುರಿತಂತೆ ಶಾಸಕರು ಮಾಹಿತಿ ಪಡೆದರು. ಮಳೆಹಾನಿಗೆ ಸಂಬಂಧಿಸಿದ ದೂರುಗಳಿಗೆ ಶೀಘ್ರವೇ ಸ್ಪಂದಿಸಲು ಸೂಚನೆ ನೀಡಿದರು. ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಯುಜಿಡಿ ಸಮಸ್ಯೆ ಇದೆ. ಈ ಹಿಂದೆ ಇದ್ದ ಅಧಿಕಾರಿಗಳ ಯಡವಟ್ಟಿನಿಂದ ಈ ಪರಿಸ್ಥಿತಿ ಬಂದಿದೆ. ಯುಜಿಡಿ ಸಂಬಂಧ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆಯಾಗದಂತೆ ನಿಗಾವಹಿಸಲಾಗುವುದು ಎಂದು ಸಭೆಯ ನಂತರ ಶಾಸಕರು ತಿಳಿಸಿದರು.

Leave a Reply

comments

Related Articles

error: