ಮೈಸೂರು

ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಎಸ್.ಎ.ರಾಮದಾಸ್ ಭೇಟಿ : ಕ್ರಮಕ್ಕೆ ಸೂಚನೆ

ಮೈಸೂರು,ಅ.28:- ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿನಯ ಮಾರ್ಗ ಕಾರಂಜಿಕೆರೆ ಗೇಟ್, ದಿ.ಚಂದ್ರೇಗೌಡರ ಮನೆಗೆ ಭೇಟಿ ನೀಡಿದರು. 5 ಲಕ್ಷ ರೂ ಗಳನ್ನು ಸರ್ಕಾರದಿಂದ ಕೊಡಿಸುವುದಾಗಿ ತಿಳಿಸಿದರು.  ರಾಜಕಾಲುವೆ ಗೋಡೆ ನಿರ್ಮಾಣವಾಗದೇ ಇರುವುದೇ ಸಮಸ್ಯೆಗೆ ಕಾರಣವಾಗಿದ್ದು, ರಾಜಕಾಲುವೆ ಗೋಡೆ ನಿರ್ಮಾಣ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಜೆಸಿ ಲೇ ಔಟ್ ನ 5ಮತ್ತು 6ನೇ ಕ್ರಾಸ್ ನಲ್ಲಿ ರಾಜಕಾಲುವೆ ಮೇಲೆ ಮನೆಗಳನ್ನು ಅಧಿಕೃತವಾಗಿ ನಿರ್ಮಿಸಿರುವುದರಿಂದ ಮನೆಗಳಿಗೆ ನೀರು ನುಗ್ಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಂಡು ಮಳೆ ನೀರು ಚರಂಡಿ ನಿರ್ಮಾಣ ಮಾಡಬೇಕಿದ್ದು, ಕ್ರಮವಹಿಸಲು ಸೂಚಿಸಿದರು.

ಮಧುವನ ಬಡಾವಣೆ ಶಂಕರ ಮಠ ನಾಲ್ಕನೇ ಕ್ರಾಸ್ ರಾಮಾನುಜ ರಸ್ತೆ 9ರಿಂದ 12ನೇ ಕ್ರಾಸ್ ನಲ್ಲಿ ರಾಜಕಾಲುವೆಯಲ್ಲಿ ಹೂಳೆತ್ತದಿರುವುದರಿಂದ ಹಾಗೂ ಮಳೆ ನೀರು ಚರಂಡಿಗಳು ಬ್ಲಾಕ್ ಆಗಿದ್ದ ಕಾರಣ ಮನೆಗಳಿಗೆ ನೀರುನುಗ್ಗಿತ್ತು. ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಚಿನ್ನಗಿರಿ ಕೊಪ್ಪಲಿನ ಭಾಗ 10,11,12ನೇ ಕ್ರಾಸ್ ಗಳಲ್ಲಿ ಯುಜಿಡಿ ಪೈಪ್ ಲೈನ್ ಅವ್ಯವಸ್ಥೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಯುಜಿಡಿ ಪೈಪ್ ಲೈನ್ ದುರಸ್ಥಿಗೊಳಿಸುವಂತೆ ಸೂಚಿಸಿದರು.

ಕಾಮಾಕ್ಷಿ ಆಸ್ಪತ್ರೆ ಮತ್ತು ಅಪೋಲೋ ಆಸ್ಪತ್ರೆಯ ಮುಂಭಾಗದ ರಸ್ತೆಗಳು ಕುವೆಂಪುನಗರ ಇಲ್ಲಿ ರಾಜಕಾಲುವೆ ಸಮಸ್ಯೆ ಮತ್ತು ಮಳೆ ನೀರು ಚರಂಡಿ ವ್ಯವಸ್ಥಿತ ರೀತಿಯಲ್ಲಿ ಇಲ್ಲದಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಐಶ್ವರ್ಯ ಬಡಾವಣೆಯಲ್ಲಿ ರಾಜಕಾಲುವೆ ಸಮಸ್ಯೆ, ಯುಜಿಡಿ ಮತ್ತು ಮಳೆ ನೀರು ಚರಂಡಿ ವ್ಯವಸ್ಥಿತ ರೀತಿಯಲ್ಲಿ ಇಲ್ಲದಿರುವುದರಿಂದ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಎಸ್ ಬಿಎಂ ಸಾರಾ ಲೇ ಔಟ್ ನಲ್ಲಿ ರಾಜಕಾಲುವೆ ಸಮಸ್ಯೆ ಮತ್ತು ಯುಜಿಡಿ ವ್ಯವಸ್ಥಿತ ರೀತಿಯಲ್ಲಿ ಇಲ್ಲದಿರುವುದು ಕಂಡು ಬಂದಿದ್ದು ಕ್ರಮ ವಹಿಸುವಂತೆ ಸೂಚಿಸಿದರು.

ಶ್ರೀರಾಂಪುರ ಎರಡನೇ ಹಂತದಲ್ಲಿ ರಾಜಕಾಲುವೆ ಸಮಸ್ಯೆ, ಯುಜಿಡಿ ಮತ್ತು ಮಳೆ ನೀರು ಚರಂಡಿ ವ್ಯವಸ್ಥಿತ ರೀತಿಯಲ್ಲಿ ಇಲ್ಲದಿರುವುದು ಕಂಡು ಬಂದಿದ್ದು ಸೂಕ್ತ ಕ್ರಮಕ್ಕೆ ಸೂಚಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ನಾಚನಹಳ್ಳಿ ಪಾಳ್ಯ ಮತ್ತು ಇ ಬ್ಲಾಕ್ ಜೆಪಿ ನಗರ ಇಲ್ಲಿ ರಾಜಕಾಲುವೆ ಸಮಸ್ಯೆ, ಯುಜಿಡಿ ಮತ್ತು ಮಳೆ ನೀರು ಚರಂಡಿ ವ್ಯವಸ್ಥಿತ ರೀತಿಯಲ್ಲಿ ಇಲ್ಲದಿರುವುದು ಕಂಡು ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಎಪ್ ಬ್ಲಾಕ್ ಉದ್ಯಾನವನ ಜೆಪಿನಗರ ಇಲ್ಲಿ ಯುಜಿಡಿ ಸಮಸ್ಯೆಯಿಂದ ಮನೆಗಳಿಗೆ ನೀರು ನುಗ್ಗಿದ್ದು ಇಲ್ಲಿಯೂ ಸೂಕ್ತ ಕ್ರಮ ಕೈಗೊಂಡು ಪೈಪ್ ಲೈನ್ ಬದಲಿಸುವಂತೆ ತಿಳಿಸಿದರು. ಈ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಕೆಲವು ಕಡೆ ಸಣ್ಣಪುಟ್ಟ ಸಮಸ್ಯೆಗಳಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿಯೂ ರಾಜಕಾಲುವೆ ಒತ್ತುವರಿ ಆಗಿದೆ. ಒಂದು ವಾರದಲ್ಲಿ ತೆರವು ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗುವುದು. ಒಂದು ವೇಳೆ ರಾಜಕಾಲುವೆ ಒತ್ತುವರಿ ಆಗಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಕಳೆದ ಬಾರಿ ಹಾನಿ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು. ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆಂಬ ಮಾಜಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದು ಮಾಜಿ ಶಾಸಕರಿಂದಲೇ ಸಲಹೆ ಪಡೆದು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭ ನಗರಪಾಲಿಕಾ ಸದಸ್ಯರಾದ   ರೂಪ,  ಛಾಯಾದೇವಿ ,ಬಿ.ವಿ.ಮಂಜುನಾಥ್,   ಚಂಪಕ,  ಗೀತಾಶ್ರೀ ಯೋಗಾನಂದ್,  ಶಾಂತಮ್ಮ ವಡಿವೇಲು, ಶಿವಕುಮಾರ್, ಸಂಬಂಧಪಟ್ಟ ಅಧಿಕಾರಿಗಳು,ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಬಿಜೆಪಿ ಕೆ.ಆರ್ ಕ್ಷೇತ್ರದ ಉಪಾಧ್ಯಕ್ಷರಾದ ಬಾಲಕೃಷ್ಣ ಎಂ.ಆರ್, ಪ್ರಧಾನಕಾರ್ಯದರ್ಶಿ ಓಂ.ಶ್ರೀನಿವಾಸ್, ಬಿ.ಎಲ್.ಎ 1 ಆದ ಪ್ರಸಾದ್ ಬಾಬು, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಪ್ರಮುಖರಾದ ಯೋಗೇಶ್ ಬಾಬು, ಯೋಗಾನಂದ್, ನಾಗರಾಜ್ ಇನ್ನಿತರರು ಹಾಜರಿದ್ದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: