ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಹ್ಯಾಟ್ರಿಕ್ ಹೀರೋ  ಶಿವರಾಜ್ ಕುಮಾರ್ ಅಭಿನಯದ “ಭಜರಂಗಿ-2” ಚಿತ್ರ ಅ. 29ಕ್ಕೆ ತೆರೆಗೆ

ರಾಜ್ಯ (ಬೆಂಗಳೂರು), ಅ.28:- ಪೋಸ್ಟರ್ ಗಳಿಂದಲೇ ಸಾಕಷ್ಟು ಸದ್ದು ಮಾಡಿದ್ದ ಚಂದನವನದ ನಟ, ಹ್ಯಾಟ್ರಿಕ್ ಹೀರೋ  ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2  ಚಿತ್ರವು ಅ. 29 ಕ್ಕೆ  ತೆರೆಕಾಣಲಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ.

ಸಿನಿಮಾ ಬಿಡುಗಡೆಗೂ ಮುನ್ನ ಇಡೀ ಚಂದನವನವನ್ನೇ ಒಂದು ಕಡೆ ಸೇರಿಸಿ ಭಜರಂಗಿ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದಾರೆ. ಈ ಸಂಭ್ರಮದಲ್ಲಿ ಚಿತ್ರದ ನಿರ್ದೇಶಕ ಎ.ಹರ್ಷ ಮಾತನಾಡಿ ಈ ಸಿನಿಮಾವನ್ನು ನಾನು ತುಂಬ ಇಷ್ಟಪಟ್ಟು ಮಾಡಿದ್ದೇನೆ. 2019ರ ಜೂನ್ ನಲ್ಲಿ ಆರಂಭಿಸಿ ಮೂರು ವರ್ಷಗಳ ಬಳಿಕ ನವೆಂಬರ್ 29, 2021ರಲ್ಲಿ ತೆರೆಮೇಲೆ ಬರುತ್ತಿದೆ.   ನಾನು ಮಾಡಿರುವ ಪ್ರತಿ ಕೆಲಸ ಜನತೆ ಮೆಚ್ಚಿರುವ ಕಾರಣ ನಾನು ಇವತ್ತು ಇಲ್ಲಿ ನಿಂತಿದ್ದೇನೆ. ಅದಕ್ಕೆ ಕನ್ನಡ ಜನತೆಗೆ ನಾನು ವಂದಿಸುತ್ತೇನೆ. ಈಗ ನನ್ನ ತಲೆಯಲ್ಲಿ ಬರಿ ಭಜರಂಗಿ-2   ಕುಳಿತಿದೆ.   ಯಾವಾಗ ನಾನೇ ಸಿನಿಮಾವನ್ನು  ಚಿತ್ರಮಂದಿರದಲ್ಲಿ ನೋಡುತ್ತೇನೆ ಅನ್ನೋ ಕುತೂಹಲ ನನ್ನಲ್ಲಿ ತುಂಬಾ ಇದೆ. ಇವತ್ತು ಭಜರಂಗಿ ಅಂದರೆ ಅದು ಶಿವಣ್ಣನೇ ಮುಂದೆ ಎಷ್ಟೇ ಭಜರಂಗಿ ಬಂದರೂ ಅದರಲ್ಲೂ ಶಿವಣ್ಣನೇ ಭಜರಂಗಿ ಆಗಲು  ಸಾಧ್ಯ  ಎಂದಿದ್ದಾರೆ.

ಸಿನಿಮಾದ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೆಂದ್ರ ಚಿತ್ರವನ್ನು   ತುಂಬ ಗಂಭಿರವಾಗಿ ತೆಗೆದುಕೊಂಡು ಮಾಡಿದ್ದಾರೆ.  ಅವರ ಬ್ಯಾನರ್ ಒಂದು ಕಾರ್ಖಾನೆ ಇದ್ದ ಹಾಗೆ. ಇವರ ಬ್ಯಾನರ್ ಕನ್ನಡ ಸಿನಿಮಾ ರಂಗದಲ್ಲಿ ನಂಬರ್ ವನ್ ಸಾನ್ಥದಲ್ಲಿ ಇದೆ. ಇವರುಗಳು ಕನ್ನಡ ಸಿನಿಮಾರಂಗಕ್ಕೆ ಕೀರ್ತಿ ಇದ್ದ ಹಾಗೇ ಎಂದು ಹೊಗಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ನಾಯಕ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ದೇಶಕ ಸಂತೋಷ ಆನಂದ್ ರಾಮ್ , ನಾಯಕ ನಟ ಯಶ್, ನಾಯಕ ನಟ ಪುನೀತ್ ರಾಜ್ ಕುಮಾರ್  ಸಿನಿಮಾದಲ್ಲಿ ನಟಿಸಿರುವ ಸಲಗ ಖ್ಯಾತಿಯ  ಯಶವಂತ್ ಶೆಟ್ಟಿ   ಎಲ್ಲರೂ ಚಿತ್ರದ ಮೇಲಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಡಿದ್ದಾರೆ.

ಚಿತ್ರದಲ್ಲಿ ಅಭಿನಯಿಸಿರುವ ನಟಿಮಣಿಯರಾದ ಭಾವನ, ಶೃತಿ  ಹಾಗೂ ಶಿವರಾಜ್ ಕುಮಾರ್ ಧರ್ಮಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ದೀಪು.ಎಸ್.ಕುಮಾರ್ ಅವರ ಸಂಕಲನಕ್ಕೆ, ಸ್ವಾಮಿ.ಜೆ   ಛಾಯಾಗ್ರಹಣವಿದೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: