ಕರ್ನಾಟಕಪ್ರಮುಖ ಸುದ್ದಿ

ಭಾಷೆಗೆ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಶಕ್ತಿ ಇದೆ : ಗೀತಗಾಯನದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಲಕ್ಷ ಕಂಠದಲ್ಲಿ ಮೊಳಗಿದ ಗೀತ ಗಾಯನ

ರಾಜ್ಯ (ಬೆಂಗಳೂರು) ಅ,28 : ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡ ಮತ್ತು ಸಂಸ್ಕೃತಿ’ ಇಲಾಖೆ ವತಿಯಿಂದ ‘ಕನ್ನಡಕ್ಕಾಗಿ ನಾವು @ಅಭಿಯಾನ’ ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮವನ್ನು ಬೆಂಗಳೂರಿನ ವಿಧಾನಸೌಧದ ಮುಂಭಾಗ ಹಮ್ಮಿಕೊಳ್ಳಲಾಗಿತ್ತು.

ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇಂಧನ ಸಚಿವರಾದ, ವಿ.ಸುನೀಲ್ ಕುಮಾರ್ . ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಹಾಗೂ ಶಾಸಕರು ಹಾಗೂ ಎರಡು ಸಾವಿರ ಗಾಯಕರು ಸೇರಿದಂತೆ ನಾಡ ಕವಿ ಕುವೆಂಪು ಅವರು ರಚಿಸಿರುವ ಹಾಗೂ ಸಿ. ಅಶ್ವಥ್ ರಾಗ ಸಂಯೋಜನೆ ಮಾಡಿರುವ ‘ನಾಡಗೀತೆ’, ಕುವೆಂಪು ಅವರ ರಚನೆಯ , ರಾಷ್ಟ್ರಪ್ರಶಸ್ತಿ ವಿಜೇತ ಶಿವಮೊಗ್ಗ ಸುಬ್ಬಣ್ಣ ರಾಗ ಸಂಯೋಜನೆಯ ‘ಬಾರಿಸು ಕನ್ನಡ ಡಿಂಡಿಮವ’ . ಪ್ರೊ, ಕೆ.ಎಸ್ ನಿಸಾರ್ ಅಹಮ್ಮದ್ ರಚನೆ ಮೈಸೂರು ಅನಂತಸ್ವಾಮಿರವರ ರಾಗ ಸಂಯೋಜನೆಯ ‘ಜೋಗದ ಸಿರಿ ಬೆಳಕಿನಲ್ಲಿ’, ಹಂಸಲೇಖ ರಚಿಸಿ ಸಂಗೀತ ಸಂಯೋಜನೆ ಮಾಡಿರುವ ಡಾ.ರಾಜ್ ಕುಮಾರ್ ಹಾಡಿ ಅಭಿನಯಿಸಿರುವ ‘ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಿ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಅಲ್ಲಿ ಸೇರಿದ್ದವರೆಲ್ಲರೂ ‘ಕನ್ನಡನಾಡಿನ ಜವಾಬ್ದಾರಿ ಪ್ರಜೆಯಾಗಿ ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ, ಕನ್ನಡದಲ್ಲಿಯೇ ಬರೆಯುತ್ತೇನೆ , ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣತೊಡುತ್ತೇನೆ ,ಕನ್ನಡನಾಡಿನಲ್ಲಿ, ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ , ಕನ್ನಡನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು , ಕಂಕಣಬದ್ದನಾಗಿರುತ್ತೇನೆ ಎಂಬ ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಸಚಿವ ವಿ. ಸುನೀಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಜವಾಬ್ದಾರಿ ಸ್ವೀಕರಿಸಿದ ನಂತರ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಗೆ ಒಂದು ಹೊಸ ಶಕ್ತಿಯನ್ನು ಕೊಟ್ಟಿದ್ದಾರೆ. ನವೆಂಬರ್ ಒಂದು ನಾವೆಲ್ಲರು ಕನ್ನಡ ರಾಜ್ಯೋತ್ಸವವನ್ನು ಸ್ವಾಗತಿಸುವ ಹೊಸ್ತಿಲಿನಲ್ಲಿದ್ದೇವೆ. ಈ ಸಂದರ್ಭದಲ್ಲಿ ಮಾತಾಡ್ ಮಾತಾಡ್ ಕನ್ನಡ ಅನ್ನುವ ಈ ಅಭಿಯಾನವನ್ನು ನಾಡಿನ ಉದ್ದಗಲದಲ್ಲೂ ಕನ್ನಡ ಅಭಿಮಾನವನ್ನು ಬೆಳೆಸೋದಕ್ಕೆ ಬೇಕಾಗಿರುವ ಪ್ರಯತ್ನವನ್ನು ಕನ್ನಡ ಸಂಸ್ಕೃತಿ ಇಲಾಖೆ ಮಾಡುತ್ತಿದೆ, ಇವತ್ತು ಜಗತ್ತಿನ ಉದ್ದಗಲಕ್ಕೂ ಲಕ್ಷ ಲಕ್ಷ ಸಂಖ್ಯೆಯಲ್ಲಿ, ನಾಡಗೀತೆ ಒಳಗೊಂಡಂತೆ ಮೂರು ಗೀತೆಗಳನ್ನು ಎಲ್ಲರೂ ಸಾರ್ವಜನಿಕವಾಗಿ ಹಾಡುವುದರ ಮೂಲಕ ನಮ್ಮೆಲ್ಲರಲ್ಲಿ ಕನ್ನಡದ ಬಗ್ಗೆ ಕನ್ನಡ ನಾಡಿನ ಬಗ್ಗೆ ಇನಷ್ಟು ಹೆಚ್ಚು ಅಭಿಮಾನ ಬರುವ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅವರ ಈ ಕ್ರಿಯಾಶೀಲ ವಿನೂತನ ಚಟುವಟಿಕೆಗಳಿಗೆ ನನ್ನ ಅಭಿನಂಧನೆ ಎಂದರು.
ಆಡು ಭಾಷೆ,ಮಾತೃ ಭಾಷೆ, ರಾಜ್ಯ ಭಾಷೆ ಅಥವಾ ನಮ್ಮ ರಾಷ್ಟ್ರ ಭಾಷೆ ಎಲ್ಲದಕ್ಕೂ ಅದರದ್ದೇ ಆದ ವಿಶೇಷವಾದ ಸ್ಥಾನಗಳಿದೆ, ಒಂದು ಭಾಷೆ ಅಂದರೆ ಅದು ಕೇವಲ ಶಬ್ದಗಳ ಜೋಡಣೆಗಳು ಅಲ್ಲ, ಅದಕ್ಕೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುವ ಶಕ್ತಿ ಇದೆ, ನಮ್ಮೆಲ್ಲರನ್ನು ಒಂದುಗೂಡಿಸುವ ಶಕ್ತಿ ಇದೆ, ನಮ್ಮಲ್ಲಿ ನಮ್ಮ ಸ್ವಾಭಿಮಾನವನ್ನು ರಾಷ್ಟ್ರಾಭಿಮಾನವನ್ನು ಬೆಳೆಸುವಂತಹ ಶಕ್ತಿ ಕನ್ನಡಕ್ಕೆ ಇದೆ, ಈ ರೀತಿಯ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ನಾಡಿನ ಅನೇಕ ಸಾಧನೆಗಳ ಬಗ್ಗೆ ಹೆಮ್ಮೆ, ಮತ್ತು ಅಭಿಮಾನವನ್ನು ಪಡೊಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಅವರು ಕನ್ನಡದ ಬಗ್ಗೆ ಹೊಸ ಜಾಗೃತಿಯನ್ನು ಮೂಡಿಸಲು ಮಾಡುತ್ತಿರುವ , ಪ್ರಯತ್ನಕ್ಕೆ, ನಾನು ವಿಧಾನ ಸಭೆಯ ಅಧ್ಯಕ್ಷನಾಗಿ ಅಭಿನಂದಿಸುತ್ತೇನೆ ಎಂದರಲ್ಲದೆ ನಾಡಿನ ಜನತೆಯನ್ನೂ ಅಭಿನಂದಿಸಿದರು.
ಸಚಿವ ಸುನೀಲ್ ಕುಮಾರ್ ಮಾತನಾಡಿ ಲಕ್ಷ ಕಂಠ ಗಾಯನದಲ್ಲಿ ಕನ್ನಡದ ಗೀತೆ ಗಾಯನ ಕರೆ ಕೊಟ್ಟಾಗ ಕರ್ನಾಟಕ ರಾಜ್ಯದಲ್ಲಿ ಒಂದು ಅಭೂತಪೂರ್ವ ವಾದ ಸ್ಪಂದನೆ ನಮಗೆ ಸಿಕ್ಕಿದೆ,ಗ್ರಾಮ ಗ್ರಾಮಗಳಲ್ಲಿ ರಸ್ತೆ ರಸ್ತೆಗಳಲ್ಲಿ, ವಿಧಾನಸೌಧದ ಮೆಟ್ಟಿಲಿನಿಂದ ಹಿಡಿದು ಗ್ರಾಮೀಣ ಪ್ರದೇಶದ ತುತ್ತ ತುದಿಯ ತನಕ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಜನರು ಕನ್ನಡ ಗೀತೆಗಳನ್ನು ಹಾಡಿದ್ದಾರೆ ಎನ್ನುವ ಮಾಹಿತಿ ನಮಗೆ ಬಂದಿದೆ , ಕನ್ನಡ ರಾಜ್ಯೋತ್ಸವ ಕನ್ನಡ ಪ್ರೇಮ ನಿತ್ಯನಿರಂತರವಾಗಬೇಕು , ನಮ್ಮ ಮನೆಯ ಮಕ್ಕಳಿಗೆ , ಕನ್ನಡದ ಹಾಡುಗಳನ್ನು ಕಲಿಸುವ ಕೆಲಸವಾಗಬೇಕು , ಕನ್ನಡದಲ್ಲಿ ನಿರಂತರವಾಗಿ ಮಾತನಾಡುವ ಹಾಗೆ ಆಗಬೇಕು , ಅನ್ಯಭಾಷೆಯ ಪ್ರಭಾವ ಕಾರಣಕ್ಕೆ ಕನ್ನಡದ ಪ್ರಭಾವವು ಕೂಡ ಎಲ್ಲೂ ಕಡಿಮೆಯಾಗಬಾರದು , ಕನ್ನಡದ ಹಾಡು ಹಾಡುತ್ತ ಕನ್ನಡದ ಸಿನಿಮಾ ನೋಡುತ್ತ , ಕನ್ನಡ ದಿನ ಪತ್ರಿಕೆ ಮತ್ತು ಕನ್ನಡ ಪುಸ್ತಕಗಳನ್ನು ಓದುತ್ತ ಕನ್ನಡ ಪ್ರೇಮ ದೊಡ್ಡ ರೀತಿಯಲ್ಲಿ ಆಗಬೇಕು ಎಂದು ತಿಳಿಸಿದರು. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: