ಮೈಸೂರು

ಮಾಜಿ ಸಚಿವ ಸಿ.ಟಿ.ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ನವರಲ್ಲಿ ಬಹಿರಂಗ ಕ್ಷಮೆಯಾಚಿಸಲಿ

ಮೈಸೂರು, ಅ.28 :- ಮಾಜಿ ಸಚಿವ ಸಿ.ಟಿ. ರವಿ ಅವರು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಒತ್ತಾಯಿಸಿದೆ.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಹಿನಕಲ್ ಪ್ರಕಾಶ್ ಸಿ.ಟಿ ರವಿ ಅವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿ ಹೇಳಿಕೆ ಹಾಕಿದ್ದನ್ನು ಖಂಡಿಸಿದರು. ನೀವು ಹಗುರವಾಗಿ ಮಾತನಾಡಿರುವುದು ನಿಮ್ಮ ಕೀಳುಮಟ್ಟದ ರಾಜಕೀಯ ಹಾಗೂ ನಿಮ್ಮ ನಡತೆಯನ್ನು ಎತ್ತಿ ತೋರಿಸುತ್ತದೆ. ಅವರ ಬಗ್ಗೆ ಮಾತನಾಡಲು ಯಾವುದೇ ಯೋಗ್ಯತೆಯು ನಿಮಗೆ ಇಲ್ಲ . ಹಾಗೂ ಆ ಯೋಗ್ಯತೆ ನಿಮಗೆ ಎಂದೂ ಬರುವುದಿಲ್ಲ . ನಿಮ್ಮ ನಾಲಿಗೆಯೇ ನಿಮ್ಮ ಯೋಗ್ಯತೆಯನ್ನು ಎತ್ತಿ ತೋರಿಸುತ್ತದೆ. ನೀವು ಫೇಸ್ ಬುಕ್ ನಲ್ಲಿ ಸಿದ್ದರಾಮಯ್ಯನವರ ಬಗ್ಗೆ ಹೇಳಿರುವುದು ಹಾಗೂ ಬಳಸಿರುವ ಪದಗಳನ್ನು ನೋಡಿದರೆ ನೀವೂ ನಿಜಕ್ಕೂ ಮಾನಸಿಕ ಅಸ್ವಸ್ಥರಾಗಿಯೋ ,ಕುಡಿದು ಪಾನಮತ್ತರಾಗಿಯೋ ಅಥವಾ ಬುದ್ಧಿಗೇಡಿಯಾಗಿಯೋ ಪೋಸ್ಟ್ ಅನ್ನು ಮಾಡಿದ್ದೀರಿ ಅನ್ನಿಸುತ್ತಿದೆ. ನಿಮಗೆ ಮಾನಸಿಕ ತುರ್ತು ಚಿಕಿತ್ಸೆ ಅತ್ಯಗತ್ಯ. ನೀವು ಮೊದಲು ಇನ್ನೊಬ್ಬರ ಬಗ್ಗೆ ಈ ತರಹದ ಹೇಳಿಕೆಗಳನ್ನು ಪೋಸ್ಟ್ ಮಾಡುವ ಬದಲು ರಾಜ್ಯದಲ್ಲಿ ಪೆಟ್ರೋಲ್ , ಡೀಸಲ್, ಗ್ಯಾಸ್, ದಿನಬಳಕೆ ಸಾಮಗ್ರಿಗಳು ಹಾಗೂ ಇನ್ನಿತರ ಬೆಲೆಗಳು ಏರತ್ತಲೇ ಇದೆ. ರಾಜ್ಯ ಹಾಗೂ ರಾಷ್ಟ್ರದ ಬಡಜನರು ಇಂದು ಜೀವನ ನಡೆಸುವುದೇ ಕಷ್ಟವಾಗಿದೆ . ಇದರ ಬಗ್ಗೆ ಹೆಚ್ಚು ಗಮನಕೊಟ್ಟು ದುರಾಡಳಿತ ನೀಡುತ್ತಿರುವ ನಿಮ್ಮ ರಾಜ್ಯ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಪ್ರಶ್ನಿಸಿ ನಿಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಿ.
ನಿಮ್ಮ ಯೋಗ್ಯತೆಯನ್ನು ಮೊದಲು ಉಳಿಸಿಕೊಳ್ಳಿ ಎಂದರು.
ಸಿದ್ದರಾಮಯ್ಯನವರ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ರಾಜ್ಯದ ಜನತೆಗೆ ಸಿದ್ದರಾಮಯ್ಯನವರ ಕೊಡುಗೆ ಏನು ಎಂಬುದು ಇಡೀ ರಾಷ್ಟ್ರ, ರಾಜ್ಯಕ್ಕೆ ಗೊತ್ತು. ನೀವು ಸಿದ್ದರಾಮಯ್ಯನವರ ಬಗ್ಗೆ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಮೊದಲು ಡಿಲೀಟ್ ಮಾಡಿ ಹಾಗೂ ರಾಜ್ಯ ಜನತೆಯ ಮುಂದೆ ನೀವು ಬಹಿರಂಗವಾಗಿ ಕ್ಷಮೆಯಾಚಿಸಿ . ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗ ನಿಮ್ಮ ವಿರುದ್ಧ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ವಿಜಯ್, ಮಹದೇವಸ್ವಾಮಿ, ಮಹೇಶ್ ಗೌಡ, ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ರಾಜ್ಯ ಸಂಚಾಲಕ ಎಸ್.ಆರ್.ರವಿ, ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಬ್ರಾಡ್ ವೈಕಿರಣ್
ಉಪಸ್ಥಿತರಿದ್ದರು. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: