ಮೈಸೂರು

ದೀಪಾವಳಿಯಲ್ಲಿ ಚೀನಾ ಪಟಾಕಿ ಯನ್ನು ಬಹಿಷ್ಕರಿಸುವಂತೆ ವಿಶ್ವ ಹಿಂದೂ ಪರಿಷತ್ ಮನವಿ

ಮೈಸೂರು,ಅ.28: – ಚೀನಾ ಪಟಾಕಿಯನ್ನು ಬಹಿಷ್ಕರಿಸಿ,ದೇವರ ಚಿತ್ರವಿರುವ ಪಟಾಕಿಯನ್ನು ದೀಪಾವಳಿ ಆಚರಣೆ ಸಂದರ್ಭ ಸಿಡಿಸದಂತೆ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಘಟಕ ಮನವಿ ಮಾಡಿದೆ.
ಮೈಸೂರು ಪತ್ರಕರ್ತರ ಭಾವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಹಬ್ಬದ ದಿನ ಮನೆಯೊಳಗೆ ಲಕ್ಷ್ಮೀಯನ್ನು ಪೂಜಿಸಿ, ಹೊರಗಡೆ ಲಕ್ಷ್ಮೀಯ ಭಾವಚಿತ್ರವಿರುವ ಪಟಾಕಿ ಸಿಡಿಸಿ, ಅದನ್ನು ಚಪ್ಪಲಿ ಕಾಲಲ್ಲಿ ತುಳಿದುಕೊಂಡು ಓಡಾಡುವುದು ವಿಪರ್ಯಾಸ. ಯಾರೊಬ್ಬರೂ ದೇವರ ಚಿತ್ರವಿರುವ ಪಟಾಕಿ ಸಿಡಿಸಬೇಡಿ ಮನವಿ ಮಾಡಿದರು.

ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವ, ಪದೇ ಪದೇ ತಗಾದೆ ತೆಗೆಯುವ ಚೀನಾಗೆ ಬುದ್ದಿ ಕಲಿಸಬೇಕು ಎಂದರೆ ಆ ದೇಶ ತಯಾರಿಸುವ ಪಟಾಕಿ ಸೇರಿದಂತೆ ಯಾವೊಂದು ವಸ್ತುವನ್ನೂ ಖರೀದಿಸಬಾರದು. ಚೀನಾ ಇದೀಗ ತನ್ನ ಉತ್ಪನ್ನಗಳಿಗೆ ಮೇಡ್ ಇನ್ ಚೀನಾ ಎಂದು ನಮೂದಿಸದೆ ಆರ್‌ಪಿಸಿ ಎಂದು ದಾಖಲಿಸುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ’ ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿ.ಬಿ.ಪ್ರದೀಶ್ ಕುಮಾರ್ , ವಿಭಾಗ ಅಧ್ಯಕ್ಷ ರಾಜೇಂದ್ರ ಬಾಬು, ಸಹ ಕಾರ್ಯದರ್ಶಿ ಮಹೇಶ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: