ಕರ್ನಾಟಕಪ್ರಮುಖ ಸುದ್ದಿ

ಸಿನಿಮಾ ಪೈರಸಿ ಮಾಡುವವರನ್ನು ಬಂಧಿಸಲಾಗುವುದು : ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

ರಾಜ್ಯ (ಬೆಂಗಳೂರು),ಅ.28 :- ಸಿನಿಮಾಗಳ ಪೈರಸಿ ಮಾಡುವವರನ್ನು ಕಾನೂನಿನ ಅಡಿಯಲ್ಲಿ ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರ್ಮಾಪಕರು ಕೋಟಿಗಟ್ಟಲೆ ಹಣವನ್ನು ಹಾಕಿ ಸಿನಿಮಾ ಮಾಡಿರುತ್ತಾರೆ , ಆದರೆ ಅದನ್ನು ಪೈರಸಿ ಮಾಡುವವರು ಅವರ ಆಸೆ ಆಕಾಂಕ್ಷೆಗಳನ್ನು ಮುರಿಯುತ್ತಾರೆ. ಸಿನಿಮಾ ರಂಗ ಸಾವಿರರು ಜನರಿಗೆ ಕೆಲಸ ನೀಡುವ ಒಂದು ಉದ್ಯಮವಾಗಿದೆ ಅಲ್ಲದೆ ನಮಗೆ ಮನರಂಜನೆಯನ್ನು ಸಹ ನೀಡುತ್ತದೆ. ಆ ಕಾರಣದಿಂದ ಗೃಹ ಇಲಾಖೆ ಕಡೆಯಿಂದ ಸಿ.ಸಿ.ಬಿ ಮತ್ತು ಸೈಬರ್ ಎರಡನ್ನೂ ಸೇರಿಸಿ ಒಂದು ಜಂಟಿ ಕಾರ್ಯಾಚರಣೆ ಪಡೆಯನ್ನು ಸಿದ್ದಪಡಿಸಲಾಗಿದೆ. ಇನ್ನು ಪೈರಸಿ ಮಾಡುವವರನ್ನು, ಬಂಧಿಸಲಾಗುವುದು ಎಂದಿದ್ದಾರೆ.

ವಿನೂತವಾಗಿ ಹೊಸ ಕೆಲಸ ಮಾಡಲಾಗುತ್ತಿದ್ದು, ಕಾರಾಗೃಹದಲ್ಲಿರುವ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡುವ ಯೋಜನೆಯಾಗಿದೆ .ಇದು ನವೆಂಬರ್ ಒಂದರಿಂದ ಆರಂಭವಾಗಲಿದೆ. ರಾಜ್ಯದಲ್ಲಿರುವ 50 ಕಾರಾಗೃಹದಲ್ಲಿ 16 ಸಾವಿರ ಖೈದಿಗಳಿದ್ದಾರೆ , ಅದರಲ್ಲಿ ಅನಕ್ಷರಸ್ಥರನ್ನು ಪತ್ತೆ ಮಾಡುತ್ತಿದ್ದು, ಅವರನ್ನು ಅಕ್ಷರಸ್ಥರಾಗಿ ಮಾಡಲು ನಿರ್ಧರಿಸಿದ್ದೇವೆ. ಅದಕ್ಕೆ ಸರ್ಕಾರದ ವಯಸ್ಕರ ಶಿಕ್ಷಣದವರನ್ನು ಬಳಸಿಕೊಂಡು ಮತ್ತು ಕಾರಾಗೃಹದಲ್ಲಿರುವ ಅಕ್ಷರಸ್ಥರನ್ನು ಇದರಲ್ಲಿ ಬಳಸಿಕೊಂಡು ಅವರು ಮಾಡಿದ ಕೆಲಸಕ್ಕೆ ಭತ್ಯೆಯನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಪೊಲೀಸ್ ಕವಾಯತು ಮಾಡುವಾಗ ಇಂಗ್ಲೀಷ್ ಪದಗಳನ್ನು ಬಳಸ ಲಾಗುತ್ತಿತ್ತು. ಆದರೆ ನವೆಂಬರ್ 1 ರಿಂದ ಕನ್ನಡದಲ್ಲಿ ಬಳಸುವ ಹಾಗೆ ಮಾಡುತ್ತಿದ್ದೇವೆ. ಅದಕ್ಕೆ ಈಗಲೇ ಅಭ್ಯಾಸವು ನಡೆಯುತ್ತಿದೆ ಎಂದು ತಿಳಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: