ಮೈಸೂರು

ವಿಶ್ವ ಧನ್ವಂತರಿ ದಿನಾಚರಣೆ ಅಂಗವಾಗಿ ಸಸಿ ವಿತರಣೆ

ಮೈಸೂರು, ಅ.28:- ವಿಶ್ವ ಧನ್ವಂತರಿ ದಿನಾಚರಣೆ ಅಂಗವಾಗಿ ಸರ್ಕಾರಿ ಆಯುರ್ವೇದ ಮಹಾವಿಶ್ವವಿದ್ಯಾಲಯ ಮತ್ತು ಸರ್ಕಾರಿ ಆಯುರ್ವೇದ ಸಂಶೋಧನ ಕೇಂದ್ರ ಅಪೂರ್ವ ಸ್ನೇಹ ಬಳಗ ವತಿಯಿಂದ “ಆಯುರ್ವೇದ ಮಾಸಾಚರಣೆ” ಸಾರ್ವಜನಿಕರಿಗೆ ಆಯುರ್ವೇದ ಸಸಿ ವಿತರಿಸುವ ಅಭಿಯಾನಕ್ಕೆ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ  ದತ್ತವಿಜಯಾನಂದ ಸ್ವಾಮೀಜಿಗಳು ಆಶ್ರಮದ ಪೌಂಡರಿಕ ಭವನ ಆವರಣದಲ್ಲಿ 126ಕ್ಕೂ ಹೆಚ್ಚು ಬಗೆಯ ಆಯುರ್ವೇದ ಸಸಿ ವಿತರಿಸುವ ಮೂಲಕ‌ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ಸ್ವಾಮೀಜಿಗಳು ಮಾತನಾಡಿ ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖವಿರುವಂತೆ ಮನುಷ್ಯನಾಗಿ ಜನಿಸಿದ ಮೇಲೆ ಆತನ ಎತ್ತರಕ್ಕೆ 5 ಸಸಿಗಳನ್ನು ನೆಡುವುದು ಕರ್ತವ್ಯ, ಕೊರೋನಾ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಆಮ್ಲಜನಕ ಎಷ್ಟರ ಮಟ್ಟಿಗೆ ಅನಿವಾರ್ಯತೆ ಎಂದು ಪ್ರಕೃತಿ ತೋರಿಸಿಕೊಟ್ಟಿದೆ, ಗಿಡಮೂಲಿಕೆ ಮರಗಿಡಗಳು ಇದಷ್ಟು ಭೂಮಂಡಲ ಬೆಳವಣಿಗೆ ಚೆನ್ನಾಗಿರುತ್ತದೆ. ರಾಮಾಯಣದಲ್ಲಿ ಲಕ್ಷ್ಮಣನಿಗೆ ಆರೋಗ್ಯ ಏರುಪೇರಾದಾಗ ಸಂಜೀವಿನಿ ಗಿರಿಯನ್ನು ಹೊತ್ತು ತಂದ ಆಂಜನೇಯ ಆಯುರ್ವೇದ ಗಿಡಮೂಲಿಕೆ ಮಹತ್ವ , ಮನುಷ್ಯನಿಗೆ ಆಹಾರ ಪದ್ದತಿಯೂ ಸಹ ಬಹಳ ಮುಖ್ಯ ಬದುಕಿಗಾಗಿ ಪೌಷ್ಠಿಕಾಂಶ ಆಹಾರ ಸೇವಿಸಬೇಕೆ ವಿನಃ ಆರೋಗ್ಯ ಕಳೆದುಕೊಳ್ಳಲು ಮುಂದಾಗಬಾರದು ಎಂದರು

ಸಮಾಜ ಸೇವಕ ಡಾ. ಕೆ. ರಘುರಾಂ ವಾಜಪೇಯಿ ಮಾತನಾಡಿ ಆಯುರ್ವೇದ ವೃಕ್ಷಗಳು‌ ಅರೋಗ್ಯ ಸಮಾಜದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಉತ್ತಮ ಗಾಳಿ ನೆರಳು ನೀಡುತ್ತದೆ, ಋಷಿ ಮುನಿಗಳು ಆಯುರ್ವೇದ ಪದ್ದತಿಯಲ್ಲಿ ಜೀವನ ಶೈಲಿ ನಡೆಸಿ ನೂರಾರು ವರುಷ ಬದುಕಿದ್ದರು ಎಂದರು.

ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರು ಗಜಾನನ ಹೆಗಡೆ ಅವರು ಮಾತನಾಡಿ ಧನ್ವಂತರಿ ದಿನಾಚರಣೆ ನವೆಂಬರ್ 2ರಂದು ಆಯುಷ್ ಇಲಾಖೆ ಆಯುರ್ವೇದ ಮಹತ್ವ ಮತ್ತು ಸಸಿ ಪೋಷಣೆಯನ್ನು ವ್ಯಾಪಕವಾಗಿ ಹಮ್ಮಿಕೊಂಡಿದ್ದು ಆಯುರ್ವೇದ ಮಾಸಾಚರಣೆಯಲ್ಲಿ 25ಸಾವಿರಕ್ಕೂ ಹೆಚ್ಚು ಆಯುರ್ವೇದ ಸಸಿ ವಿತರಿಸುವ ಅಭಿಯಾನವಾಗಿದೆ, ಇಂದು ದತ್ತವಿಜಯಾನಂದ ಶ್ರೀಗಳಿಂದ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ.

ಕೆಮ್ಮು, ಜ್ವರ ,ನೆಗಡಿ ಬಂದಾಗ ಮನೆಯಲ್ಲಿಯೇ ಔಷಧಿ ಆಯುರ್ವೇದ ಗಿಡಮೂಲಿಕೆಯಿಂದ ತಯಾರಿಸಬಹುದು ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಿರಿಯ ನಾಗರೀಕರು ಮತ್ತು ಸಣ್ಣ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಿರುವುದನ್ನು ನಿವಾರಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆ ಹಲವಾರು ಕಾರ್ಯಕ್ರಮ ಆಯೋಜಿಸಿದೆ ಎಂದರು.

ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಖ್ಯಾತ ಆಯುರ್ವೇದ ವೈದ್ಯರಾದ ಡಾ.ಚಂದ್ರಶೇಖರ್ , ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಪ್ರೊಫೆಸರ್ ಡಾ .ಲಕ್ಷ್ಮಿಕಾಂತ ಶೆಣೈ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್ ,ಸಾಮಾಜಿಕ ಹೋರಾಟಗಾರರಾದ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಶಿಕ್ಷಕರಾದ ರವಿ ಶಂಕರ್, ವಿನಯ್ ಬಾಬು ,ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: