ಮೈಸೂರು

ಕಂಚಿ ಶಂಕರ ಮಠ ವೇದ ಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಮೈಸೂರು, ಅ.28:- ರಮಾವಿಲಾಸ ರಸ್ತೆಯ ಲ್ಲಿರುವ
ಕಂಚಿ ಶಂಕರಮಠ ವೇದ ಶಾಲಾ, ಮಠ ಹಾಗೂ ದೇವಸ್ಥಾನಕ್ಕೆ ಕಂಚಿ ಶಂಕರಮಠ ಭಕ್ತಾದಿಗಳ ಹಣದಿಂದ 3ಕೋಟಿ ವೆಚ್ಚದ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ದೇವಸ್ಥಾನ ಆವರಣದಲ್ಲಿ ಕಂಚಿ ಶಂಕರಮಠ ಚಾರಿಟೆಬಲ್ ಟ್ರಸ್ಟ್
ವತಿಯಿಂದ ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ವಿ ರಾಜೀವ್ , ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,
ಮೈ ವಿ ರವಿಶಂಕರ್ ,ಬಿಜೆಪಿ ವಕ್ತಾರರ ಎಂ ಜೆ ಮಹೇಶ್ ,ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಮೂಡ ಸದಸ್ಯರಾದ ನವೀನ್ ಕುಮಾರ್ , ಟ್ರಸ್ಟ ಸದಸ್ಯರುಗಳಾದ ಬದ್ರಿ ನಾರಾಯಣ್ ,ನೀಲಾ ರಾಮಮೂರ್ತಿ ,ದೀಪಕ್ ,ವೈದ್ಯನಾಥನ್ ,ವಿಘ್ನೇಶ್ವರ್ ಭಟ್ ,ಸುದರ್ಶನ್ ,ಅಜಯ್ ಶಾಸ್ತ್ರಿ  ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: