ಕರ್ನಾಟಕಪ್ರಮುಖ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ : ಚಾಮರಾಜನಗರದಲ್ಲಿ ಸ್ವಯಂ ಘೋಷಿತ ಬಂದ್

ರಾಜ್ಯ(ಚಾಮರಾಜನಗರ), ಅ.30:-  ಚೆಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ  ಇಂದು  ಚಾಮರಾಜನಗರ  ಸ್ವಯಂ ಘೋಷಿತ ಬಂದ್  ಆಗಿದೆ.

ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿರುವ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸೂಚಿಸುವ ಸಲುವಾಗಿ  ನಗರದ ಶಿವಸೈನ್ಯ ,  ಅಪ್ಪು ಬ್ರಿಗೇಡ್ , ರಾಜರತ್ನ ಸಮಿತಿ   ಹಾಗೂ ಡಾ. ರಾಜ್ ಕುಮಾರ್ ವಿವಿಧ ಅಭಿಮಾನಿಗಳ ಸಂಘಗಳು ಇಂದು  ಸ್ವಯಂ ಪ್ರೇರಿತ ಬಂದ್ ಮಾಡುವಂತೆ  ನಗರದ ಜನತೆಗೆ ಕರೆನೀಡಿದ್ದರಾದರೂ ಖುದ್ದು ಅಲ್ಲಿನ ಜನರೇ ಸ್ವಯಂ ಘೋಷಿತ ಬಂದ್ ಮಾಡಿದ್ದರು.

ಕರೆಗೆ ಓಗೊಟ್ಟು  ನಗರದ ಜನತೆ ಸ್ವಯಂ ಪ್ರೇರಿತವಾಗಿ  ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ.   ನಗರದಲ್ಲಿ ಆಸ್ಪತ್ರೆ, ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಮತ್ತೆ ಬೇರೆ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ.  ಬೆರಳೆಣಿಕೆಯ ಪೆಟ್ರೋಲ್ ಬಂಕ್  ತೆರೆದಿದ್ದು, ಮತ್ತೆ ಯಾವುದೂ ತೆರೆದಿಲ್ಲ . ಚಾಮರಾಜನಗರ ಜಿಲ್ಲೆಯ ಗಾಜನೂರಿನ ಮೊಮ್ಮಗನಾದ ಅಪ್ಪುವನ್ನು ಕಳೆದು ಕೊಂಡ ಚಾಮರಾಜನಗರ ಇಂದು ಶೋಕಸಾಗರದಲ್ಲಿ ಮುಳುಗಿದೆ. (ಎಸ್.ಎಂ)

Leave a Reply

comments

Related Articles

error: