ಕರ್ನಾಟಕಪ್ರಮುಖ ಸುದ್ದಿ

ಕೆಪಿಸಿಸಿ ಅಧ್ಯಕ್ಷರನ್ನು ನಮ್ಮ ನಾಯಕರು ಆಯ್ಕೆ ಮಾಡುತ್ತಾರೆ : ಡಿ.ಕೆ.ಶಿವಕುಮಾರ್

ಪ್ರಮುಖಸುದ್ದಿ, ರಾಜ್ಯ(ಬೆಂಗಳೂರು) ಮೇ.4 :-  ನನಗೆ ಕಾಂಗ್ರೆಸ್‍ನಲ್ಲಿ ಮಾರ್ಕೆಟ್ ಇದೆ. ಅದಕ್ಕೆ  ಎಲ್ಲರೂ  ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ  ನನ್ನ ಹೆಸರು ಹೇಳುತ್ತಿದ್ದಾರೆ ಹೀಗೆಂದು ಹೇಳಿದವರು ಇಂಧನ ಸಚಿವ ಡಿ.ಕೆ.ಶಿವಕುಮಾರ್.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ನನ್ನ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರಲಿ ಬಿಡಿ ಎಂದಿದ್ದಾರೆ. ಆರು ದಿನಗಳ ಹಿಂದೆ ಖಾಸಗಿ ಪ್ರವಾಸದ ಮೇಲೆ ನಾನು ಅಮೇರಿಕಕ್ಕೆ ತೆರಳಿದ್ದೆ. ಆದರೆ ಬರುವಾಗ ದೆಹಲಿಗೆ ತೆರಳಿ ಇಂಧನ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿದೆ. ಅಲ್ಲಿ ಪಕ್ಷದ ಕಚೇರಿಗೆ ತೆರಳಿ ನಾಯಕರನ್ನು ಭೇಟಿಯಾಗಿ ಬಂದಿದ್ದೇನೆ. ಬೇರಾವ ಕಾರಣಕ್ಕೂ ಹೋಗಿರಲಿಲ್ಲ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಗೊತ್ತಿಲ್ಲ. ಸ್ವಾಭಾವಿಕವಾಗಿ ದೆಹಲಿಗೆ ತೆರಳಿದಾಗ ಪಕ್ಷದ ಕಚೇರಿಗೆ ತೆರಳಿ ವರಿಷ್ಠರು, ರಾಜ್ಯ ಉಸ್ತುವಾರಿ ನಾಯಕರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಉಸ್ತುವಾರಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ. ನಾನೆಲ್ಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನು ನಮ್ಮ ನಾಯಕರು ಆಯ್ಕೆ ಮಾಡುತ್ತಾರೆ. ಹೈಕಮಾಂಡ್ ಯಾವತ್ತು ಆದೇಶ ಹೊರಡಿಸುತ್ತೋ ಅಂದು ಕೆಪಿಸಿಸಿ ಅಧ್ಯಕ್ಷರು ಆಯ್ಕೆ ಆಗುತ್ತಾರೆ ಎಂದು ತಿಳಿಸಿದರು.- (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: