ಮೈಸೂರು

ಸೆ.1ರಂದು ಸುತ್ತೂರು ಕ್ಷೇತ್ರದಲ್ಲಿ ಶ್ರಾವಣ ಮಾಸದ ಪ್ರವಚನ ಸಮಾರೋಪ ಸಮಾರಂಭ

ಶ್ರೀಕ್ಷೇತ್ರ ಸುತ್ತೂರು ಸಂಸ್ಥಾನ ಮಠದಲ್ಲಿ ಪವಿತ್ರ ಶ್ರಾವಣಮಾಸದ ಪೂಜಾನುಷ್ಠಾನ ಮತ್ತು ಪ್ರವಚನದ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ.

ಸೆ.1ರ ಗುರುವಾರದಂದು  ಸಂಜೆ 6:30ಕ್ಕೆ ನಡೆಯಲಿರುವ ಸಮಾರೋಪದ ದಿವ್ಯ ಸಾನಿಧ್ಯವನ್ನು  ಶ್ರೀ ಶಿವರಾತ್ರಿ ದೇಶಿಕೇಂದ್ರ  ಸ್ವಾಮೀಜಿ ವಹಿಸುವರು. ತೇಜೂರಿನ ಶ್ರೀ ಸಿದ್ದರಾಮೇಶ್ವರ ಮಠದ ಕಲ್ಯಾಣಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರು ಉಪವಿಭಾಗಾಧಿಕಾರಿ ಸಿ.ಎಲ್. ಆನಂದ್ ಭಾಗವಹಿಸಲಿದ್ದಾರೆ. ನಂಜನಗೂಡಿನ ಸಹಾಯಕ ಪೊಲೀಸ್ ಅಧೀಕ್ಷೆ ದಿವ್ಯಾ ಸಾರಾ ಥಾಮಸ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಗುಬ್ಬಿ ಮಲ್ಲಣ್ಣಾರ್ಯ ವಿರಚಿತ ‘ವೀರಶೈವಾಮೃತ ಪುರಾಣ’ ಕುರಿತು ಡಾ.ಸಿ.ಜಿ. ಉಷಾದೇವಿ ಮತ್ತು ಪ್ರೊ.ಎಚ್.ಬಿ. ದೇವಣ್ಣ ಪ್ರವಚನ, ಧರಿತ್ರಿ ಆನಂದ್ ವಾಚಿಸುವರು.

Leave a Reply

comments

Tags

Related Articles

error: