ಪ್ರಮುಖ ಸುದ್ದಿ

ಬ್ರಿಗೇಡ್‌ನಲ್ಲಿ ಭಾಗವಹಿಸದಂತೆ ಈಶ್ವರಪ್ಪಗೆ ಹೈಕಮಾಂಡ್ ಸೂಚನೆ

ಪ್ರಮುಖ ಸುದ್ದಿ, (ರಾಜ್ಯ)ಬೆಂಗಳೂರು, ಮೇ೪: ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನ ಮಾಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಡೆಸದಂತೆ ಕೆ.ಎಸ್ ಈಶ್ವರಪ್ಪ ಅವರಿಗೆ ಸೂಚಿಸಿದೆ.

ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಹೊರಟಿರುವ ಬಿಜೆಪಿಗೆ ರಾಜ್ಯ ಘಟಕದಲ್ಲೇ ತೊಡಕಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರ ನಡುವಿನ ಜಗಳ ತಾರಕಕ್ಕೇರಿದ್ದು ಅದನ್ನು ತಡೆಯಲು ಮುಂದಾಗಿದೆ. ಮೇ ೮ರಂದು ರಾಯಚೂರಿನಲ್ಲಿ ನಡೆಸಲು ಉದ್ದೇಶಿಸಿರುವ ರಾಯಣ್ಣ ಬ್ರಿಗೇಡ್‌ನಲ್ಲಿ ಯಾವುದೇ ಕಾರಣಕ್ಕೂ ಭಾಗವಹಿಸಬಾರದು. ನಿಯಮ ಉಲ್ಲಂಘಿಸಿ ಭಾಗವಹಿಸಿದ್ದೇ ಆದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ನಿಮ್ಮ ಜಗಳದಿಂದ ಈಗಾಗಲೇ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಪುನಃ ನೀವು ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪಕ್ಕೆ ಗುರಿಯಾಗುತ್ತೀರಿ ಎಂದು ವರಿಷ್ಠರು ಸೂಚ್ಯವಾಗಿ ಹೇಳಿದ್ದಾರೆ.

ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಅವರು ರಾಯಣ್ಣ ಬ್ರಿಗೇಡ್‌ನಲ್ಲಿ ಪಾಲ್ಗೊಳ್ಳಬಾರದು ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಆದರೂ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಿಮ್ಮಿಂದ ಮುಂದುವರೆದಿವೆ. ಹೀಗಾಗಿ ಬ್ರಿಗೇಡ್ ಚಟುವಟಿಕೆಗಳನ್ನು ನಿಲ್ಲಿಸಬೇಕು, ಇಲ್ಲವೇ ನೀವು ಭಾಗವಹಿಸಬಾರದು ಎಂದು ಸೂಚಿಸಿದ್ದಾರೆ. (ವರದಿ ಬಿ.ಎಂ)

 

 

Leave a Reply

comments

Related Articles

error: