ಮೈಸೂರು

ಹಿರಿಯ ನಾಗರಿಕರೋರ್ವರಿಗೆ ಕಾರ್ಪೊರೇಟರ್ ಪತಿಯಿಂದ ಧಮ್ಕಿ

ಮೈಸೂರು, ಮೇ.5:–   ಕಾರ್ಪೋರೇಟರ್ ಗಳು ಇರೋದು ಯಾಕೆ ? ವಾರ್ಡ್ ನಲ್ಲಿರೋ ಜನರ ವಾರ್ಡ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸೋದಕ್ಕೆ. ಆದರೆ ಇಲ್ಲೋರ್ವ ಕಾರ್ಪೊರೇಟರ್  ತನ್ನ ಪತಿಯ ಮೂಲಕ ಹಿರಿಯ ನಾಗರಿಕರಿಗೆ ಧಮ್ಕಿ ಹಾಕುವ ಮೂಲಕ ಸುದ್ದಿಯಾಗಿದ್ದಾರೆ.

ಕಾರ್ಪೊರೇಟರ್ ಗಳನ್ನು ಜನತೆ ಆರಿಸಿ ಕಳಿಸುವುದೇ ತಮ್ಮ ತಮ್ಮ ವಾರ್ಡ್ ಸಮಸ್ಯೆಗಳು ಬಗೆಹರಿಯಲು ಎಂದು. ಆದರೆ 47 ನೇ ವಾರ್ಡ್ ನ ಸದಸ್ಯೆ ಸಂಶದ್ ಬೇಗಂ ಮನೆಯ ಬಳಿ ಬಂದ ಹಿರಿಯ ನಾಗರಿಕರೋರ್ವರು ಮನೆಗೆ ಮಳೆ ನೀರು ನುಗ್ಗುತ್ತಿದೆ. ಪರಿಹರಿಸಿಕೊಡಿ ಎಂದು ಕೇಳಿಕೊಂಡು ಬಂದವರಿಗೆ ಸದಸ್ಯೆಯ ಪತಿ ಬೆದರಿಕೆ ಹಾಕಿ ಕಳುಹಿಸಿದ ಘಟನೆ ನಡೆದಿದೆ.  ಸಂಶದ್ ಬೇಗಂ ಪತಿ ಆರಿಫ್ ಹುಸೇನ್ ಮೈಸೂರಿನ ಮಾಜಿ ಮೇಯರ್ ಹಾಗೂ ಸಿಎಂ ಸಿದ್ದರಾಮಯ್ಯಗೂ ಆಪ್ತ ಎನ್ನಲಾಗುತ್ತಿದೆ. ಪತ್ನಿ ನಾಮಕಾವಾಸ್ಥೆ ಸದಸ್ಯೆಯಾಗಿದ್ದು, ಪತಿಯೇ  ಇಲ್ಲಿ ಎಲ್ಲಾ ದರ್ಬಾರನ್ನೂ ನಡೆಸುತ್ತಾರೆ. ದೂರು ದುಮ್ಮಾನ ಹೇಳಿಕೊಳ್ಳುವ ನಾಗರಿಕರೊಂದಿಗೆ ಅಸಭ್ಯ ನಡವಳಿಕೆ ತೋರಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: