ಕರ್ನಾಟಕಪ್ರಮುಖ ಸುದ್ದಿಮನರಂಜನೆ

ನಟ ರಜನಿಕಾಂತ್ ಗೆ ಪುನೀತ್ ಸಾವಿನ ಸುದ್ದಿ ನಂಬಲಾಗುತ್ತಿಲ್ಲ  : ಶಿವರಾಜ್ ಕುಮಾರ್

ರಾಜ್ಯ(ಬೆಂಗಳೂರು)ನ.4:-    ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹೃದಯ ಸಂಬಂಧಿ ತೊಂದರೆಗೊಳಗಾಗಿದ್ದರು. ಕಳೆದ ತಿಂಗಳು 28 ರಂದು ಅವರನ್ನು ಚೆನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಮೂಲಗಳ ಪ್ರಕಾರ ತಲೈವಾಗೆ ಕಾರ್ಟಾಯ್ಡ್ ಆರ್ಟರಿ ರಿವ್ಯಾಸ್ಕುಲರೈಸೇಶನ್  ಮಾಡಲಾಗಿದೆಯಂತೆ. ಮೂರು ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.ರಜನಿ ಆಸ್ಪತ್ರೆಗೆ ದಾಖಲಾದ ಮರುದಿನವೇ ಪುನೀತ್ ರಾಜ ಕುಮಾರ್ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

70 ವರ್ಷದ  ತಮಿಳಿನ ಸೂಪರ್ ಸ್ಟಾರ್ ಚೇತರಿಸಿಕೊಂಡು ನಗುತ್ತಾ ಮನೆಗೆ ಮರಳಿದರೆ 46  ವರ್ಷ ವಯಸ್ಸಿನ ಕನ್ನಡದ ಪವರ್ ಸ್ಟಾರ್,ಕುಟುಂಬಸ್ಥರ ಮತ್ತು ಕೋಟ್ಯಾಂತರ ಅಭಿಮಾನಿಗಳ ನಗುವಿನ ಮೇಲೆ ನಿರ್ಬಂಧ ಹೇರಿ  ವಿಧಿ ವಶರಾಗಿದ್ದರು.   ರಜಿನಿಕಾಂತ್ ಆಸ್ಪತ್ರೆಯಲ್ಲಿದ್ದಾಗ ಅವರ ಡಾಕ್ಟರ್, ಶಿವರಾಜ್ ಕುಮಾರ್ ಅವರಿಗೆ ಕರೆ ಮಾಡಿದ್ದರಂತೆ. ರಜನಿಕಾಂತ್ ಅಪ್ಪು ನಿಧನರಾಗಿರುವ ವಿಷಯವನ್ನು ನಂಬುತ್ತಿರಲಿಲ್ಲವಂತೆ. ಬುಧವಾರದಂದು  ಖುದ್ದು ರಜನಿ ಶಿವಣ್ಣನವರಿಗೆ ಫೋನ್ ಮಾಡಿ ಅತೀವ ದುಃಖ ವ್ಯಕ್ತಪಡಿಸಿದ್ದರಂತೆ.    ಶಿವರಾಜ್ ಕುಮಾರ್  ಈ ವಿಷಯವನ್ನು  ಮಾಧ್ಯಮದವರಿಗೆ ತಿಳಿಸಿದ್ದಾರೆ.

ಅಪ್ಪು ರಜನಿ ಸರ್ ಮುಂದೆ ಬೆಳೆದ ಮಗು, ಅವನು ಚಿಕ್ಕವನಿದ್ದಾಗ ಎತ್ತಿ  ಆಡಿಸಿದ್ದಾರೆ. ಅವನ ಮೇಲೆ ಅವರಿಗೆ ಬಹಳ ಪ್ರೀತಿ ಇತ್ತು. ಅದರಿಂದ ಅವರಿಗೆ ಪುನೀತ್ ಸಾವಿನ ಸುದ್ದಿ ನಂಬಲಾಗುತ್ತಿಲ್ಲ. ರಜನಿಕಾಂತ್ ಅವರ ಪತ್ನಿ ಲತಾ ಅವರು ಸಹ  ಫೋನ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು  ಭಾವುಕರಾಗಿ ತಿಳಿಸಿದ್ದಾರೆ. (ಎಸ್.ಎಂ,ಎಸ್.ಎಚ್)

 

Leave a Reply

comments

Related Articles

error: