ಮೈಸೂರು

77ದಿನಗಳ ಚಿಕಿತ್ಸೆ ನಂತರ ಮಹಿಳೆ ಗುಣಮುಖ : ಮಾಹಿತಿ

ಮೈಸೂರು , ನ.4 : – ಮೈಸೂರಿನ ಭಾನವಿ ಆಸ್ಪತ್ರೆಯಲ್ಲಿ ಚಿಕಿತ್ಸೆ 77 ದಿನಗಳ ಆಸ್ಪತ್ರೆ ಚಿಕಿತ್ಸೆಯ ನಂತರ 58 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ.
ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನವಿ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕರಾದ ಆರ್. ಪ್ರಶಾಂತ್, ಮಾಹಿತಿ ನೀಡಿದರು.
ಆಗಸ್ಟ್ 15 ರಂದು ಒಬ್ಬ ಮಹಿಳೆ ನಮ್ಮ ಆಸ್ಪತ್ರೆಗೆ ದಾಖಲಾದರು . ಅವರು 105 ಕೆ.ಜಿ ತೂಕವಿದ್ದು, ಸಕ್ಕರೆ ಖಾಯಿಲೆ, ಬಿ.ಪಿ, ನಿದ್ರಾಹೀನತೆ ಖಾಯಿಲೆಗಳಿಂದ ಬಳಲುತ್ತಿದ್ದರು .ನಮ್ಮ ಆಸ್ಪತ್ರೆಗೆ ಬಂದಾಗ ಸಿ.ಟಿ ಸ್ಯ್ಕಾನ್ ಗೆ ಒಳಪಡಿಸಿದಾಗ ಕೋವಿಡ್ ಎಂದು ತಿಳಿದು ಸಂಬಂದಪಟ್ಟ ಚಿಕಿತ್ಸೆಯನ್ನು ICMR ಮಾರ್ಗ ಸೂಚಿಯಂತೆ ತಕ್ಷಣವೇ ಪ್ರಾರಂಭಿಸಲಾಯಿತು. ಇವರಿಗೆ ಆಕ್ಸಿಜನ್, ರೆಡ್ಮಿಸಿವಿರ್, ರಕ್ತ ತೆಳುವಾಗುವಂತಹ ಔಷಧಿಗಳನ್ನು ನೀಡಲಾಯಿತು. ಬಳಿಕ ತೀವ್ರತೆಯು ಹೆಚ್ಚಾಗ ತೊಡಗಿದ್ದರಿಂದ ಮತ್ತೆ ಇವರಿಗೆ ಸಿ.ಟಿ ಸ್ಯ್ಕಾನ್ ಗೆ ಒಳಪಡಿಸಿದಾಗ ಕೋವಿಡ್ ಹೆಚ್ಚಾಗಿದ್ದರಿಂದ ಈ ಎಲ್ಲ ಔಷಧಿಗಳಿಗೆ ಚಿಕಿತ್ಸೆಗೆ ರೋಗಿ ಪ್ರತಿಕ್ರಿಯಿಸುತ್ತಿರಲಿಲ್ಲ, 5 ದಿನಗಳ ವರೆಗೆ ರೋಗಿಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಉಳಿಯುವ ಸಾಧ್ಯತೆಯು ಕಡಿಮೆಯಿತ್ತು. ನಂತರ ಶ್ವಾಸಕೋಶಕ್ಕೆ ನೇರವಾಗಿ ಸಂಪೂರ್ಣ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಯಿತು. ಆದರೆ ಅವರ ತೂಕ 105 ಕೆ.ಜಿ ಇದ್ದ ಕಾರಣ ಇದರ ವ್ಯವಸ್ಥೆ ಫಲಿಸಲಿಲ್ಲ. 2 ದಿನಗಳ ನಂತರ ಹೃದಯದ ಬಡಿತ ವ್ಯತ್ಯಾಸವಾಗುತ್ತಿತ್ತು.ಇವರ ದೇಹದ ಮುಖ್ಯ ಅಂಗಾಂಗಳಿಗೆ ಅಡ್ಡ ಪರಿಣಾಮಗಳಾಗದಂತೆ ತೀವ್ರ ನಿಗಾವಹಿಸಲಾಗಿತ್ತು. ಹೃದಯದ ಸುತ್ತ ನೀರು ಸೇರಿಕೊಂಡಿತ್ತು.
ಈ ರೀತಿಯ ಚಿಕಿತ್ಸೆಯನ್ನು ಸುಮಾರು 60 ದಿನಗಳ ಕಾಲ ನೀಡಿದೆವು. ಇದೇ ಹಂತಕ್ಕೆ ಹಲವಾರು ರೋಗಿಗಳು ಬದುಕುಳಿಯುವುದೆ ಕೇವಲ 100 ಕ್ಕೆ 1% ರಿಂದ 2% ಮಾತ್ರ. ಈ ರೋಗಿಗೆ 50 ರಿಂದ 55ದಿನಗಳವರೆಗೆ 100% ಆಕ್ಸಿಜನ್ ನೀಡಬೇಕಾಯಿತು. ಈ ಹಂತದಲ್ಲಿ ಚಿಕಿತ್ಸೆ ನೀಡುವುದು ದೊಡ್ಡ ಸಾಹಸವೇ ಆಗಿತ್ತು. ಏಕೆಂದರೆ ಅವರ ತೂಕ ದಿಂದ ಪ್ರತಿಬಾರಿ ಸುಮಾರು 7 ರಿಂದ 8 ಜನಗಳು ಸೇರಿ ಇವರನ್ನು ಮಕಾಡೆ ಮಲಗಿಸಿ ಮತ್ತೆ ಮೊದಲಿನ ಹಂತಕ್ಕೆ ಮಲಗಿಸಿ ಈ ರೀತಿಯಾಗಿ ಚಿಕಿತ್ಸೆಯನ್ನು ನೀಡುತ್ತಿದ್ದೆವು. ಈ ನಡುವೆ ಹಲವಾರು ತೀವ್ರನಿಗಾ ಘಟಕದ ವೈದ್ಯರ ಸಲಹೆ ಪಡೆಯಲಾಯಿತು. ಆದರೆ ಇದಕ್ಕಿಂತಲೂ ಹೆಚ್ಚಿನ ಚಿಕಿತ್ಸೆಯನ್ನು ನೀಡಲು ಯಾವುದೇ ಮಾರ್ಗವಿರಲಿಲ್ಲ , ಶ್ವಾಸಕೋಶ ಮರುಜೋಡಣೆ ಒಂದೇ ಉಳಿದ ಮಾರ್ಗವೆಂದು ಹಲವರು ತಜ್ಞರು ವೈದ್ಯರು ಅಭಿಪ್ರಾಯ ಪಟ್ಟಿದ್ದರು . ರೋಗಿಯ ಸ್ಥಿತಿ ಗಂಭಿರವಾಗಿದ್ದು , ಸ್ಕ್ಯಾನಿಂಗ್ ಗೆ ಕೂಡ ವರ್ಗಾಯಿಸುವ ಸುಸ್ಥಿತಿಯಲ್ಲಿಲ್ಲದಿದ್ದರಿಂದ ಇದೇ ಚಿಕಿತ್ಸೆಯನ್ನು ಮುಂದುವರೆಸಲಾಯಿತು . 65 ದಿನಗಳ ಚಿಕಿತ್ಸೆ ನಂತರ ರೋಗಿಯ ಸ್ಥಿತಿ ಹಂತ ಹಂತವಾಗಿ ಉತ್ತಮವಾಗಿ ವೆಂಟಿಲೆಶ್ ನ್ ನಿಂದ ಹೊರತಂದು , ಆಕ್ಸಿಜನ್ ನಿಂದ ಹೊರತಂದು .ಸಂಪೂರ್ಣ ಸ್ವಯಂ ಉಸಿರಾಡುವ ಹಂತಕ್ಕೆ ತಂದು ಅಕ್ಬೋಬರ್ 30 ರಂದು ಡಿಸ್ಚಾರ್ಜ್ ಮಾಡಲಾಯಿತು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: