ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯ ನವರೇ ನೀವು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದು ಹೊಟ್ಟೆಪಾಡಿಗಾಗಿಯೇ : ಬಿಜೆಪಿ ಟ್ವೀಟ್

ರಾಜ್ಯ (ಬೆಂಗಳೂರು), ನ.4 :- ಅಹಿಂದ ನಾಯಕರೆಂದು ಅಧಿಕಾರಕ್ಕೆ ಬಂದ ಮೇಲೆ ದಲಿತರ ಪರ ಕೆಲಸ ಮಾಡುವುದು ನಿಮ್ಮ ಕರ್ತವ್ಯ . ಅದರಲ್ಲಿ ನೀವು ಹೆಚ್ಚುಗಾರಿಕೆ ಮೆರೆಯುವ ಅಗತ್ಯವಿಲ್ಲ . ನಾನೇ ಮಾಡಿದ್ದು ಎಂದು ಬೀಗುವಾಗ 10 ಬಾರಿ ಯೋಚಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಸಿದ್ದರಾಮಯ್ಯನವರೇ ಎಷ್ಟು ಬಾರಿ ಹಳೆ ಕತೆ ಹೇಳುತ್ತೀರಿ. ? ಜನ ಹೊಸದನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ .
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಂದೆ ನಿಂತು ದಲಿತರನ್ನು ಸಿಎಂ ಮಾಡುತ್ತೇನೆ ಎಂದು ಹೇಳಿ ಆಗ ನಿಮ್ಮ ದಲಿತ ಪ್ರೇಮ ಒಪ್ಪಿಕೊಳ್ಳೋಣ, ಎಂದು ಬಿಜೆಪಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯನವರಿಗೆ ದಲಿತರು ಅಂದರೆ ಕೇವಲ ವೋಟ್ ಬ್ಯಾಂಕ್ . ಹೀಗಾಗಿಯೇ ದಲಿತರ ಅಭಿವೃದ್ಧಿಗೆ ಹಣ ನೀಡಿದ್ದೇನೆ ಎನ್ನುತ್ತಾರೆ. ಆಂತರ್ಯದಲ್ಲಿ ದಲಿತ ನಾಯಕರನ್ನು ತುಳಿದು ಅಧಿಕಾರಕ್ಕೇರ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯರದ್ದು ಬಣ್ಣದ ತಗಡಿನ ತುತ್ತೂರಿ ಎಂದು ಸಿದ್ದರಾಮಯ್ಯ ವಿರುದ್ದ ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಸಿದ್ದರಾಮಯ್ಯನವರೇ ದಲಿತ ಪರ ಕಾಳಜಿ ಮೆರೆದಿದ್ದೀರಲ್ಲವೆ.? ಹಾಗಾದ್ರೆ ದಲಿತ ನಾಯಕ ಪರಮೇಶ್ವರ್ ರನ್ನು ಸೋಲಿಸಿದ್ಯಾರು.? ಸಿಎಂ ಆಗುವುದಕ್ಕೆ ಅಡ್ಡಿಯಾಗ್ತಾರೆಂದು ನೀವೇ ಸೋಲಿಸಿಲ್ಲವೇ ? ಸತ್ಯದರ್ಶನ ಮಾಡಿಸುವಿರಾ ? ನೀವು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದು ಹೊಟ್ಟೆಪಾಡಿಗಾಗಿಯೇ ? ಖರ್ಗೆಯವರನ್ನು ದೆಹಲಿಗೆ ಸಾಗಹಾಕಿದ್ದು ಹೊಟ್ಟೆಪಾಡಿಗಾಗಿಯೇ ? ಎಂದು ಪ್ರಶ್ನೆ ಮಾಡಿದೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: