ಕರ್ನಾಟಕಪ್ರಮುಖ ಸುದ್ದಿ

ಹಾಸನಾಂಬೆಯ ದರ್ಶನಕ್ಕೆ ಇಂದು ವಿದ್ಯುಕ್ತ ತೆರೆ

ರಾಜ್ಯ(ಹಾಸನ), ನ. 6 :-  ಹಾಸನದ ಇತಿಹಾಸ ಪ್ರಸಿದ್ಧ ಹಾಸನಾಂಬೆಯ ದರ್ಶನಕ್ಕೆ ಇಂದು ವಿದ್ಯುಕ್ತ ತೆರೆ ಬೀಳಲಿದೆ.  ಕಳೆದ ಹತ್ತು ದಿನಗಳಿಂದ ಲಕ್ಷಾಂತರ ಭಕ್ತರಿಗೆ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ದೇವಾಸ್ಥಾನದ ಬಾಗಿಲು ತೆರೆಯಲಾಗಿತ್ತು.

ಇಂದಿಗೆ ಹತ್ತು ದಿನಗಳು ಕಳೆದಿದ್ದು, ಎಂದಿನಂತೆ ಬಲಿಪಾಡ್ಯಮಿಯ ಮಾರನೇಯ ದಿನ ದೇವಾಲಯದ  ಬಾಗಿಲನ್ನು ಮುಚ್ಚುವುದು ಪ್ರತೀತಿ.  ಇಂದು ಮಧ್ಯಾಹ್ನ 12 ಗಂಟೆಯ ನಂತರ ದೇವಾಲಯದ ಗರ್ಭ ಗುಡಿಯ ಬಾಗಿಲನ್ನು  ಶಾಸ್ತ್ರೋಕ್ತವಾಗಿ, ಹಾಸನದ ಉಸ್ತುವಾರಿ ಸಚಿವರಾದ ಗೋಪಾಲಯ್ಯ, ಶಾಸಕ ಪ್ರೀತಮ್ ಗೌಡ, ಜಿಲ್ಲಾಧಿಕಾರಿ ಆರ್.  ಗಿರೀಶ್,ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸಮ್ಮುಖದಲ್ಲಿ ಮುಚ್ಚಲಾಗುತ್ತದೆ ಎಂದು  ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ. (ಎಸ್.ಎಂ)

Leave a Reply

comments

Related Articles

error: