ಮೈಸೂರು

ದೇವರ ದಾಸಿಮಯ್ಯ ಜಯಂತಿಯ ಪ್ರಯುಕ್ತ ವಸ್ತ್ರ ವಿತರಣೆ

ಮೈಸೂರು, ಮೇ.5:- ದೇವರ ದಾಸಿಮಯ್ಯ ಜಯಂತಿಯ ಪ್ರಯುಕ್ತ ಮೈಸೂರಿನ ಚಿಕ್ಕಗಡಿಯಾರದ ಹತ್ತಿರ ಪುರುಷ ಮತ್ತು ಮಹಿಳಾ ವ್ಯಾಪಾರಿಗಳಿಗೆ ಮೈಸೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಉಚಿತ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀದೇವರ ದಾಸಿಮಯ್ಯ ಜಯಂತಿಯ ಪೂರ್ಭಾವಿಯಾಗಿ ಮೈಸೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಆರ್.ಮೂರ್ತಿ ಪುರುಷ ಮತ್ತು ಮಹಿಳಾ ವ್ಯಾಪಾರಿಗಳಿಗೆ ಉಚಿತ ವಸ್ತ್ರವನ್ನು ವಿತರಿಸಿದರು.

ಈ ಸಂದರ್ಭ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಉಗ್ರಶೆಟ್ಟಿ, ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ನರಸಿಂಹಮೂರ್ತಿ, ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು. – (ಎಸ್.ಎಚ್)

Leave a Reply

comments

Related Articles

error: