ಮೈಸೂರು

ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ ಸಮಾವೇಶ : ಅಪ್ಪಣ್ಣ ಭಾಗಿ

ಮೈಸೂರು, ನ.7:- ಮ್ಯಾಂಚೆಸ್ಟರ್ ಹಾಗೂ ಬರ್ಮಿಂಗ್ಹ್ಯಾಮ್ ನಗರಗಳಲ್ಲಿ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ ಸಮಾವೇಶದ ಅಂಗವಾಗಿ ನಡೆದ ಸಭೆಯಲ್ಲಿ ಕರ್ನಾಟಕ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷರಾದ  ಅಪ್ಪಣ್ಣ ರವರು ಉಪಸ್ಥತರಿದ್ದರು.

ಇವರೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ  ವಿಜಯ್ ಶರ್ಮ, ನಿರ್ದೇಶಕರಾದ  ಸಿಂಧು ಬಿ ರೂಪೇಶ್ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಪ್ರಧಾನ ವ್ಯವಸ್ಥಾಪಕರಾದ ಯುವರಾಜ್, ಸ್ಕೃವೇ ಮನು ಹಾಗೂ ಸಮಾರಂಭ ವ್ಯವಸ್ಥಾಪಕರಾದ ದೀಪಕ್ ರವರು ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಉತ್ತೇಜಿಸಲು ಜೆಎಲ್ಆರ್ ಅಧ್ಯಕ್ಷರಾದ  ಅಪ್ಪಣ್ಣರವರು ಕರ್ನಾಟಕ ರಾಜ್ಯದಲ್ಲಿ ಪ್ರವಾಸಿಗರಿಗೆ ಇಷ್ಟವಾಗುವ ಕರಾವಳಿ ಪ್ರದೇಶ, ಅರಣ್ಯ, ವನ್ಯ ಜೀವಿಗಳು, ನದಿಗಳು, ಐತಿಹಾಸಿಕ ದೇವಾಲಯಗಳು, ರಾಜ ಪರಂಪರೆ, ಅರಮನೆಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಆರೋಗ್ಯ ಪ್ರವಾಸದ ಕುರಿತಂತೆ ವಿವರ ನೀಡಿದರು. ಲಂಡನ್ ನಗರದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆಯ ಕರ್ನಾಟಕದ ಮಳಿಗೆಗೆ, ಸಮಾರಂಭ ವ್ಯವಸ್ಥಾಪಕರಾದ ದೀಪಕ್ ರವರು ಕೌಶಲ್ಯದಿಂದ ತಮ್ಮದೇ ಆದ ವಿಶೇಷ ಚಾಪು ಮೂಡಿಸುವ ಮೂಲಕ ಇತರ ದೇಶಗಳ ಪ್ರತಿನಿಧಿಗಳನ್ನು ಕರ್ನಾಟಕ ರಾಜ್ಯದ ಮಳಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: