ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಅಪ್ಪು ನಿಧನ ಕನ್ನಡ ಚಿತ್ರರಂಗಕ್ಕಾಗಿರುವ ದೊಡ್ಡ ಆಘಾತ : ನಟ ದೇವರಾಜ್

ರಾಜ್ಯ(ಬೆಂಗಳೂರು),ನ.8 : – ಇಂದು ದಿ. ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಹಿರಿಯ ನಟ ದೇವರಾಜ್ ಪುನೀತ್ ಅವರ ಸಮಾಧಿ ಬಳಿ ಆಗಮಿಸಿ ನಮನ ಸಲ್ಲಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಇದು ನಮ್ಮ ಕನ್ನಡ ಚಿತ್ರರಂಗಕ್ಕೆ ಆಗಿರುವಂತ ದೊಡ್ಡ ಅಘಾತ ಹಾಗೂ ದುರಂತ. ಅನೇಕ ಯುವ ನಾಯಕರುಗಳನ್ನು ನಾವು ಕಳೆದು ಕೊಳ್ಳುತ್ತಿದ್ದೇವೆ. ಯಾಕೀರಬಹುದು ಎಂದು ನನಗೂ ಅರ್ಥವಾಗುತ್ತಿಲ್ಲ. ಇದನ್ನೆಲ್ಲ ನೋಡಿದರೆ ಬಹಳ ದುಃಖವಾಗುತ್ತದೆ. ನಮ್ಮ ಶಂಕರ್ ನಾಗ್ ಕಾಲದಿಂದ ಶಂಕರ್ ನಾಗ್, ಸುನೀಲ್ , ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಇವತ್ತೂ ಅಪ್ಪು , ಇವರನೆಲ್ಲ ಕಳೆದು ಕೊಂಡಿರುವುದು ತುಂಬ ದುಃಖದ ಸಂಗತಿ. ಕಾರಣಗಳು ಏನೇ ಇದ್ದರೂ ಬಹಳ ನೋವಾಗುತ್ತದೆ. ಅಪ್ಪು ಎಲ್ಲರ ಮನದಲ್ಲೂ ಸದಾ ಅಮರರಾಗಿರುತ್ತಾರೆ.
ಶಿವಣ್ಣ ಒಂದು ಮಾತನ್ನು ಹೇಳಿದ್ರು, ಅವರಿಗೆ ಯಾವ ಪದ್ಮಶ್ರೀ ನೂ ಬೇಡ ಅವರು ಅಮರಶ್ರೀ ಅಂತ ಅದು ಸತ್ಯವಾದ ಮಾತು ಎಂದು ಭಾವುಕರಾದರು. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: